ಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ*
ರಾಜ್ಯ ಸರ್ಕಾರ ಕಬ್ಬಿಗೆ ಟನ್ಗೆ ₹3300 ದರ ಘೋಷಿಸಿದ ಬಳಿಕ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ವಿಜಯಪುರ ನಗರದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದು, ಎಲ್ಲಾ ಕಾರ್ಖಾನೆಗಳವರನ್ನೂ ಒಪ್ಪಿಸಿ ಒಂದು ನಿರ್ಣಯಕ್ಕೆ ಬಂದಿದ್ದೇವೆ.
ಎಲ್ಲರೂ ಒಪ್ಪಿದ್ದಾರೆ. ಕಬ್ಬು–ಸಕ್ಕರೆ ವಿಚಾರದಲ್ಲಿ ಎಫ್ಆರ್ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರದ ಅಧಿಕಾರ, ರಾಜ್ಯದದ್ದಲ್ಲಾ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರವೇ ಎಫ್ಆರ್ಪಿ ದರವನ್ನು ₹3550 ಎಂದು ನಿಗದಿ ಮಾಡಿದೆ. ಕಟಾವು ಮತ್ತು ಸಾಗಾಟ ವೆಚ್ಚ ಸೇರಿ ರೈತನಿಗೆ ₹2600–₹2700 ದೊರೆಯುತ್ತದೆ.
ಈಗ ನಾವು ಅದಕ್ಕಿಂತ ₹700 ಹೆಚ್ಚು ದರ ನೀಡಿದ್ದೇವೆ,” ಎಂದು ಸಚಿವರು ಸ್ಪಷ್ಟಪಡಿಸಿದರು. ಇನ್ನೂ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಸರ್ಕಾರದ ಪಾತ್ರವನ್ನು ನೆನಪಿಸುತ್ತಾ ಎಫ್ಆರ್ಪಿ, ಎಂಎಸ್ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರ. ಸಕ್ಕರೆ ರಫ್ತು, ಆಮದು ನಿರ್ಧಾರಗಳೂ ಕೇಂದ್ರದ ಕೈಯಲ್ಲಿ ಇವೆ.
ರಾಜ್ಯ ಸರ್ಕಾರ ಕೇಂದ್ರದ ನಿಗದಿಯನ್ನು ಜಾರಿಗೊಳಿಸುವ ಕೆಲಸ ಮಾಡುತ್ತದೆ ಎಂದರು. ಇನ್ನೂ ರೈತರ ಹೋರಾಟದಲ್ಲಿ ರಾಜಕೀಯ ನಡೆಯುತ್ತಿರುವ ಬಗ್ಗೆ ಅವರು ಟೀಕಿಸಿದರು. ರೈತರ ಹೋರಾಟದಲ್ಲಿ ಬಿಜೆಪಿಯವರು ರಾಜಕೀಯ ಮಾಡಿದರು. ನನ್ನ ಸಹೋದರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲಿ ಹೋಗಿ ಮಲಗಿ ನಾಟಕ ಮಾಡಿದರು,” ಎಂದು ಕಿಡಿಕಾರಿದರು.
ಅಲ್ಲದೇ ನೆರೆಯ ರಾಜ್ಯ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಪತ್ರ ಬರೆದು, ಸಕ್ಕರೆ ದರವನ್ನು ₹31ರಿಂದ ₹41ಕ್ಕೆ ಏರಿಸಬೇಕು ಎಂದು ಮನವಿ ಮಾಡಿದ್ದಾರೆ. ಸಕ್ಕರೆ ದರ ಏರಿಸಿದರೆ ರೈತರಿಗೆ ಪ್ರಯೋಜನವಾಗುತ್ತದೆ,” ಎಂದಿದ್ದಾರೆ. ಕೊನೆಯಲ್ಲಿ ಸಚಿವ ಪಾಟೀಲ್ ಮನವಿ ಮಾಡಿದ್ದಾರೆ –
“ಬಿಜೆಪಿಯವರೇ ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಿ, ರೈತರಿಗೆ ಅನುಕೂಲವಾಗುವಂತೆ ಒತ್ತಾಯಿಸಲಿ,” ಎಂದು ಕೋರಿದರು
Laxmi News 24×7