ಗೋಕಾಕ : ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಅಭಿಮಾನಿ ಬಳಗ ವತಿಯಿಂದ ಯುವ ನಾಯಕ ಸಂತೋಷ ಜಾರಕಿಹೊಳಿ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.



ನಂತರ ಗೋಕಾಕ ಹಾಗೂ ಯರಗಟ್ಟಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಉಪಹಾರವನ್ನು ವಿತರಿಸುವ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಮುಖಂಡರಾದ ಪ್ರಶಾಂತ ಜೋರಾಪುರ, ಪ್ರವೀಣ್ ನಾಯ್ಕ್, ನಾಗಣ್ಣ ಹಟ್ಟಿ, ಶೇಷಾಚಲ ಹೊನ್ನತ್ತಿ, ಪ್ರವೀಣ ಅವಡಖಾನ, ಸಲಿಲ್ ಜಾಡವಾಲೆ, ಸಚಿನ್ ಕಲಾಲ , ಮಂಜುನಾಥ್ ಮುರಘೋಡ , ರಘು, ವಿನಾಯಕ ಹಾಗೂ ಸಂತೋಷ್ ಗುಡ್ಡನ್ನವರ, ಕಿಶೋರ್ ಕಲಾಲ ಹಾಗೂ ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿಗಳು ಉಪಸ್ಥಿತರಿದ್ದರು
Laxmi News 24×7