ಬೆಂಗಳೂರು: ಯತೀಂದ್ರ ಹೇಳಿಕೆಗೆ ನಮ್ಮ ಸಹಮತವಿದೆ. ತಪ್ಪೇನಿದೆ ಅದರಲ್ಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ನಮ್ಮ ಸಹಮತವಿದೆ ತಪ್ಪೇನಿದೆ ಅದರಲ್ಲಿ? ಎಂದು ಸಮರ್ಥಿಸಿಕೊಂಡಿದ್ದಾರೆ.
ಯತೀಂದ್ರ ಬೆಳಗಾವಿಯಲ್ಲಿ ಸಿದ್ದರಾಮಯ್ಯ ನಂತರ ಅಹಿಂದ ಚಳವಳಿ ಮುಂದುವರೆಸುವಲ್ಲಿ ಜಾರಕಿಹೊಳಿ ಸಮರ್ಥರಿದ್ದಾರೆ ಎಂದಿದ್ದಾರೆ. ಇದಕ್ಕೆ ನನ್ನ ಸಹಮತವಿದೆ. ಸತೀಶ್ ಜಾರಕಿಹೊಳಿ ಈಗ ಸಿಎಂ ಆಗಲ್ಲ. 2028ಕ್ಕೆ ಸಿಎಂ ಆಕಾಂಕ್ಷಿ ಎಂದಿದ್ದಾರೆ. ಅದಕ್ಕೂ ನನ್ನ ಸಹಮತವಿದೆ ಎಂದು ಅವರು ಹೇಳಿದ್ದಾರೆ.
ಅವರೆಲ್ಲ ಮೇಧಾವಿಗಳಿದ್ದಾರೆ: ಯತೀಂದ್ರಗೆ ನೋಟೀಸ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಡಿ.ಕೆ.ಶಿವಕುಮಾರ್ ಮತ್ತು ಟೀಂ ಒತ್ತಡ ಹೇರಿದ್ರೆ ನೋಡೋಣ. ಅವರೆಲ್ಲ ಮೇಧಾವಿಗಳಿದ್ದಾರೆ. ತೀರ್ಮಾನ ನೋಡೋಣ ಬಿಡಿ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಸಂಪುಟ ಸೇರ್ಪಡೆಯಾಗುವ ಗುಡ್ ನ್ಯೂಸ್ ಇದಿಯಾ ಎಂಬ ಬಗ್ಗೆ ಕೇಳಿದಾಗ, ನನಗೆ ಎಲ್ಲ ಕಾಲದಲ್ಲಿಯೂ ಅದೃಷ್ಟ ಇದೆ. ಮತ್ತೆ ಮಂತ್ರಿಯಾಗುವ ಬಗ್ಗೆ ನಾನು ಅದೇನೂ ಹೇಳಲ್ಲ. ಹೈಕಮಾಂಡ್ ಎಲ್ಲ ತೀರ್ಮಾನ ಮಾಡತ್ತದೆ. ನಮ್ಮ ಮೇಲಿನ ಅಭಿಮಾನಕ್ಕೆ ಅಭಿಮಾನಗಳು ಮಾತಾಡ್ತಾರೆ ಎಂದರು.
ನಮ್ಮ ಸಮುದಾಯದರು 16 ಜನ ಶಾಸಕರು ಇದ್ದೇವೆ. ಇಬ್ಬರನ್ನು ತೆಗೆದಿದ್ದಾರೆ. ಆ ಸ್ಥಾನ ತುಂಬಬೇಕು. ಸಿಎಂ ಬದಲಾವಣೆ ಇಲ್ಲವೇ ಇಲ್ಲ. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ದೆಹಲಿಗೆ ಹೋಗ್ತೇನೆ. ಸಚಿವಗಿರಿ ಕೊಡಿ ಅಂತ ಹೋಗಲ್ಲ. ನನ್ನ ಮೇಲೆ ಬಂದಿರೋ ಆರೋಪದ ಬಗ್ಗೆ ಸ್ಪಷ್ಟನೆ ಕೊಡಲು ಹೋಗ್ತೇನೆ. ಸಿಎಂ ಅವರು ಹೋಗೋದು ಗೊತ್ತಿಲ್ಲ. ಬಿಹಾರ ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ಸಮಯ ಕೊಡಬೇಕು ಎಂದರು.
Laxmi News 24×7