ಕತ್ತಲಲ್ಲಿ ಮುಳುಗಿದ ಬಾದಾಮಿ ತಾಲ್ಲೂಕು ಆಸ್ಪತ್ರೆ….ರೋಗಿಗಳ ಪರದಾಟ!!!
ಗ್ಯಾಂಗ್ರೀನ್ ರೋಗಿಗಳಿಗೂ ಜನರಲ್ ವಾರ್ಡ್‌ನಲ್ಲೇ ಚಿಕಿತ್ಸೆ ???
2 ದಿನದಿಂದ ಬಾದಾಮಿ ತಾಲ್ಲೂಕು ಆಸ್ಪತ್ರೆ ವಿದ್ಯುತ್ ಕಡಿತ
ವೈದ್ಯಾಧಿಕಾರಿ ಡಾ. ವಿರೇಶ್ ಶೆಟ್ಟರ್ ನಿರ್ಲಕ್ಷ್ಯಕ್ಕೆ ಸ್ಥಳೀಯರ ರಾತ್ರಿ ಪ್ರತಿಭಟನೆ.
ಗ್ಯಾಂಗ್ರೀನ್ ರೋಗಿಗೆ ಜನರಲ್ ವಾರ್ಡ್‌ನಲ್ಲೇ ಚಿಕಿತ್ಸೆ
ಕತ್ತಲಲ್ಲಿ ಮುಳುಗಿದ ಆಸ್ಪತ್ರೆ ; ಪರದಾಡಿದ ರೋಗಿಗಳು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಆಸ್ಪತ್ರೆಯು ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ಆಗರವಾಗಿದೆ. ಬಡವರು ಚಿಕಿತ್ಸೆ ಪಡೆಯುವ ಈ ಆಸ್ಪತ್ರೆಯ ಸ್ಥಿತಿ ರಾತ್ರಿ ವೇಳೆ ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿದೆ.
ಮುಖ್ಯವಾಗಿ, ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ವೈದ್ಯರು ರೋಗಿಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿರೇಶ್ ಶೆಟ್ಟರ್ ಅವರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಮತ್ತು ಸ್ಥಳೀಯರು ಆಕ್ರೋಶಗೊಂಡಿದ್ದು, ರಾತ್ರಿ ವೇಳೆ ಪ್ರತಿಭಟನೆ ನಡೆಸಿದ್ದಾರೆ. ಅಸಮರ್ಪಕ ಚಿಕಿತ್ಸೆ ಮತ್ತು ಸ್ವಚ್ಛತೆ ಕೊರತೆಯ ಜೊತೆಗೆ, ಗ್ಯಾಂಗ್ರೀನ್ನಂತಹ ಸಾಂಕ್ರಾಮಿಕ ರೋಗಿಗೆ ಜನರಲ್ ವಾರ್ಡ್‌ನಲ್ಲೇ ಚಿಕಿತ್ಸೆ ನೀಡುತ್ತಿರುವುದು ರೋಗಿಗಳ ಸಂಬಂಧಿಕರ ಆತಂಕಕ್ಕೆ ಕಾರಣವಾಗಿದೆ. ಗ್ಯಾಂಗ್ರೀನ್ ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.
ಈ ಮಧ್ಯೆ, ಕೆಲವು ತಿಂಗಳ ಹಿಂದೆ ಇದೇ ತಾಲ್ಲೂಕು ಆಸ್ಪತ್ರೆಯಲ್ಲಿ ಹೊಸ ವಿದ್ಯುತ್ ಬ್ಯಾಟರಿಗಳ ಕಳ್ಳತನ ಮತ್ತು ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆಸ್ಪತ್ರೆಯ ಹೊಸ ಬ್ಯಾಟರಿಗಳನ್ನು ಅಕ್ರಮವಾಗಿ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿತ್ತು ಎಂಬ ಗಂಭೀರ ಆರೋಪ ಮುಖ್ಯ ವೈದ್ಯಾಧಿಕಾರಿ ಡಾ. ವಿರೇಶ್ ಶೆಟ್ಟರ್ ಅವರ ವಿರುದ್ಧ ಕೇಳಿಬಂದಿತ್ತು.
ಈ ಬಗ್ಗೆ ಕೇಳಿದಾಗ, ‘ಆಂಬ್ಯುಲೆನ್ಸ್‌ನಲ್ಲಿ ಬ್ಯಾಟರಿಗಳು ಅಕ್ರಮ ಸಾಗಾಟ ಆಗಿದ್ದರೂ ನನಗೆ ಏನು ಗೊತ್ತಿಲ್ಲ’ ಎಂದು ವೈದ್ಯಾಧಿಕಾರಿ ಹೇಳಿದ್ದರು. ಈ ಹಳೆಯ ನಿರ್ಲಕ್ಷ್ಯದ ಕೃತ್ಯಗಳ ಹಿನ್ನೆಲೆಯಲ್ಲಿ, ಈಗಿನ ವಿದ್ಯುತ್ ಕಡಿತ ಮತ್ತು ಪರ್ಯಾಯ ವ್ಯವಸ್ಥೆಯ ವೈಫಲ್ಯವು ಆಸ್ಪತ್ರೆಯ ಆಡಳಿತದ ಬಗ್ಗೆ ಮತ್ತಷ್ಟು ಅನುಮಾನ ಮೂಡಿಸಿದೆ.
ಆರೋಗ್ಯ ಸಚಿವರು ಮತ್ತು ಸ್ಥಳೀಯ ಶಾಸಕ ಭೀಮಸೇನ್ ಚಿಮ್ಮನಕಟ್ಟಿಯವರು ತಮ್ಮ ಕ್ಷೇತ್ರದ ಆಸ್ಪತ್ರೆಯ ಈ ದುಸ್ಥಿತಿಯ ಬಗ್ಗೆ ಗಮನಹರಿಸಬೇಕಿದೆ.
Laxmi News 24×7