ಧಾರವಾಡದ ನವಲಗುಂದದಲ್ಲಿ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ.. ಹಲ್ಲೆ ನಡೆಸಿದ ಆರೋಪಿ ಬಂಧನ.
ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಆತನನ್ನು ಜೈಲಿಗೆ ಅಟ್ಟುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆದಿದ್ದ ವೇಳೆ ಅಣ್ಣಿಗೇರಿ ಪಿಎಸ್‌ಐ ಉಮಾದೇವಿಯ ಜೀಪಿಗೆ ಬೈಕ್ ಮೇಲೆ ಬಂದ ದ್ಯಾಮನಗೌಡ ಎಂಬುವವನು ಡಿಕ್ಕಿ ಹೊಡೆದಿದ್ದ. ದ್ಯಾಮನಗೌಡ ಕುಲಕರ್ಣಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಈತ ಪಿಎಸ್‌ಐಗೆ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದ. ಅಲ್ಲದೇ ಪಿಎಸ್‌ಐ ಮೇಲೆ ಈತ ಹಲ್ಲೆ ಕೂಡ ನಡೆಸಿದ್ದ. ಸದ್ಯ ಆತನ ಮೇಲೆ ದೂರು ದಾಖಲಿಸಿಕೊಂಡಿರುವ ನವಲಗುಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಲೈನಮೆನ್ ಕೂಡ ಆಗಿರುವ ಆರೋಪಿ ದ್ಯಾಮನಗೌಡ, ನವಲಗುಂದ ತಾಲೂಕಿನ ಗುಡಿಸಾಗರದ ನಿವಾಸಿಯಾಗಿದ್ದಾನೆ. ಆತನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.