ನಾಯಕ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ
ರಮೇಶ್ ಕತ್ತಿ ವಿರುದ್ಧ ಮುಧೋಳದಲ್ಲಿ ಜಾತಿ ನಿಂದನೆ ದೂರು ದಾಖಲು
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಾಯಕ ಸಮಾಜದ ಕುರಿತು ಅವಹೇಳನಕಾರಿ ಪದಬಳಕೆ ಮಾಡಿದ ಆರೋಪದ ಮೇಲೆ ರಮೇಶ್ ಕತ್ತಿ ಅವರ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ.
ಕತ್ತಿ ಅವರ ಹೇಳಿಕೆಯನ್ನು ವಿರೋಧಿಸಿ ವಾಲ್ಮೀಕಿ ನಾಯಕ ಸಮುದಾಯದ ಸದಸ್ಯರು ಮತ್ತು ವೀರ ಸಿಂಧೂರ ಲಕ್ಷ್ಮಣ ಯುವ ಸೇನೆಯ ಕಾರ್ಯಕರ್ತರು ನಗರದ ಪೊಲೀಸ್ ಠಾಣೆ ಬಳಿ ತೀವ್ರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ರಮೇಶ್ ಕತ್ತಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯ ಬಳಿಕ, ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಮುಧೋಳ ನಗರ ಠಾಣೆಗೆ ತೆರಳಿ ರಮೇಶ್ ಕತ್ತಿ ಅವರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ,
ನಾಯಕ ಸಮಾಜದವರು ಅವಹೇಳನಕಾರಿ ಹೇಳಿಕೆ ನೀಡಿದ ರಮೇಶ್ ಕತ್ತಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಧೋಳ ನಗರ ಠಾಣೆ ಪೊಲೀಸರು ದೂರು ಸ್ವೀಕರಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
Laxmi News 24×7