Breaking News

ಜನತೆಗೆ ಉಡುಗೊರೆ ಕೊಡುತ್ತಾರೋ, ಬಿ ಖಾತೆಯವರಿಂದ ದೀಪಾವಳಿ ಉಡುಗೊರೆ ಪಡೆಯುತ್ತಾರೋ ಗೊತ್ತಿಲ್ಲ: ಹೆಚ್​ಡಿಕೆ

Spread the love

ಮಂಡ್ಯ : ಈ ಸರ್ಕಾರ ಬಂದ ಮೇಲೆ ಗೈಡೆನ್ಸ್​ ವ್ಯಾಲ್ಯೂ ಜಾಸ್ತಿ ಮಾಡಿಕೊಂಡರು. ಬಿ ಖಾತಾದಿಂದ ಎ ಖಾತಕ್ಕೆ 5 ಲಕ್ಷದಿಂದ 10 ಲಕ್ಷ ಎಲ್ಲಿ ಕಟ್ಟುತ್ತಾರೋ ಗೊತ್ತಿಲ್ಲ. ಅದರಿಂದ 10-15 ಸಾವಿರ ಕೋಟಿ ವಸೂಲಿ ಮಾಡುತ್ತಾರೋ ಅಥವಾ ಇದು ಜನತೆಗೆ ಉಡುಗೊರೆ ಕೊಡುತ್ತಾರೋ, ಇಲ್ಲವೇ, ಬಿ ಖಾತೆಯವರಿಂದ ದೀಪಾವಳಿ ಉಡುಗೊರೆಯನ್ನು ಪಡೆಯುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.

ಮಂಡ್ಯದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಆಟೋ ನಿಲ್ದಾಣ ಹಾಗೂ ನೂತನ ಮಾರುಕಟ್ಟೆ ಉದ್ಘಾಟನೆ ಮಾಡಿದರು. ನಂತರ ನಗರದ ಸಂಜಯ ವೃತ್ತದಲ್ಲಿ ಸಂಸದರ ನಿಧಿಯಿಂದ ಸಿಎಸ್​​ಆರ್ ಅನುದಾನದಲ್ಲಿ ಹೊಸದಾಗಿ ನಿರ್ಮಾಣವಾದ ಹೈಟೆಕ್ ಆಟೋ ನಿಲ್ದಾಣವನ್ನು ಉದ್ಘಾಟಿಸಿದರು. ತದನಂತರ ಮಂಡ್ಯದ KSRTC ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿರುವ ಹೈಟೆಕ್ ಆಟೋ ನಿಲ್ದಾಣಕ್ಕೆ ಪೂಜೆ ಸಲ್ಲಿಸಿ ಟೇಪ್ ಕತ್ತರಿಸಿ ಚಾಲನೆ ನೀಡಿದರು.ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಎನ್ನುತ್ತಿದ್ದಾರೆ. ದುಡ್ಡು ಸಂಗ್ರಹ ಮಾಡಲು ಮಾತ್ರ ಚಿಂತನೆ ಮಾಡ್ತಾರೆ. ನಾನು ಇಂಡಸ್ಟ್ರಿ ತರಲು ಆಗುತ್ತಾ? ಮಂಡ್ಯದಲ್ಲಿ ಲ್ಯಾಂಡ್ ಇಲ್ಲ, ರಾಜ್ಯ ಸರ್ಕಾರ ಲ್ಯಾಂಡ್ ಕೊಡಬೇಕು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ