Breaking News

RSS, ಬಿಜೆಪಿ ಬೈಯ್ಯೋ ಸಲುವಾಗಿ ಪ್ರಿಯಾಂಕ್​ ಖರ್ಗೆಗೆ ಪ್ರತ್ಯೇಕ ಇಲಾಖೆ ಮಾಡಿ: ಬಸನಗೌಡ ಪಾಟೀಲ್ ಯತ್ನಾಳ್ ಗರಂ

Spread the love

ಬೆಂಗಳೂರು: “ಆರ್​ಎಸ್​ಎಸ್​​​​, ಬಿಜೆಪಿ ಬೈಯ್ಯುವ ಸಲುವಾಗಿಯೇ ಪ್ರಿಯಾಂಕ್​​​​​ ಖರ್ಗೆಗೆ ಪ್ರತ್ಯೇಕ ಇಲಾಖೆ ಮಾಡಿ” ಎಂದು ಶಾಸಕ ಬಸನಗೌಡ ಪಾಟೀಲ್​​​​​​​ ಯತ್ನಾಳ್​​ ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, “ಪ್ರಿಯಾಂಕ್​ ಖರ್ಗೆ ಅವರೇ ನಿಮಗೆ ನೂರಾರು ಕೆಲಸಗಳಿವೆ. ಗೂಗಲ್​ ಎಐ ಹೋಯ್ತು. ನೀವೇನು ಆರ್​ಎಸ್ಎಸ್​ ​ವಿರೋಧಿ ಮಂತ್ರಿಯೋ?. ತಾಲಿಬಾನಿ ಮಂತ್ರಿಯೋ?. ಅಥವಾ ಐಟಿ ಬಿಟಿ ಮಂತ್ರಿಯೋ?. ಹೊಸ‌ ಇಲಾಖೆ ಸೃಷ್ಟಿ ಮಾಡಿ. ಆರ್​ಎಸ್​​ಎಸ್​,‌ ಬಿಜೆಪಿ, ಹಿಂದೂಗಳನ್ನು ಬೈಕೋತಾ ಹೋಗಿ. ಮಲ್ಲಿಕಾರ್ಜುನ ಖರ್ಗೆ ಅವರ ಮಗ ಇದ್ದಾರೆ. ಹಾಗಾಗಿ ಮಂತ್ರಿ ಮಂಡಲ ಬದಲಾವಣೆ ಕೂಗಿನ ಮಧ್ಯೆ ವಿರೋಧ ಬೇಡ ಅಂತ. ಪ್ರಿಯಾಂಕ್​ ಖರ್ಗೆ ಹೇಳಿದ್ದಕ್ಕೆಲ್ಲಾ ತಥಾಸ್ತು ಅಂತಿದ್ದಾರೆ. ಪಾಪ ಸಿದ್ದರಾಮಯ್ಯ ಅವರ ಮನಸ್ಸಲ್ಲಿ ಏನಿದ್ಯೋ” ಎಂದು ಟೀಕಿಸಿದರು.

ಆರ್​​ಎಸ್ಎಸ್​ ಬ್ಯಾನ್​ ಬಗ್ಗೆ ಪ್ರಿಯಾಂಕ್​ ಖರ್ಗೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, “ಪ್ರಿಯಾಂಕ್​​ ಖರ್ಗೆ ಅವರು ಪತ್ರ ಬರೆದಿದ್ದಾರೆ. ತಮಿಳುನಾಡು ಮಾದರಿ ತರುತ್ತಿಲ್ಲ ಇವರು ಪಾಕಿಸ್ತಾನ ಮಾದರಿ ತರುತ್ತಿದ್ದಾರೆ. ಪಾಕಿಸ್ತಾನದ ಅತ್ಯಂತ ಪ್ರೀತಿಯ ರಾಜಕಾರಣಿ ಸಿದ್ದರಾಮಯ್ಯನವರು. ಹಿಂದೆ ಸಿಎಂ ಹೇಳಿಕೆ ಕೊಟ್ಟಾಗ ಪಾಕಿಸ್ತಾನದ ಚಾನೆಲ್​ಗಳು ಕೊಂಡಾಡಿದ್ದವು. ನಾನು ಪ್ರಿಯಾಂಕ್ ಖರ್ಗೆಗೆ ಹೇಳುತ್ತೇನೆ. ನೀವು ಅಂಬೇಡ್ಕರ್ ವಾದಿಗಳಲ್ಲ. ನಿಮಗೆ ನಿಜವಾಗಿಯೂ ಅಂಬೇಡ್ಕರ್​ ಬಗ್ಗೆ ಕಳಕಳಿ ಇದ್ದರೆ ತಕ್ಷಣ ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟು ಅಪ್ಪ ಮಗ ಇಬ್ಬರೂ ಹೊರ ಬನ್ನಿ” ಎಂದು ವಾಗ್ದಾಳಿ ನಡೆಸಿದರು.

“ಅಂಬೇಡ್ಕರ್ ಹಿಂದೆಯೇ ಹೇಳಿದ್ದರು ಕಾಂಗ್ರೆಸ್‌ಗೆ ದಲಿತರು ಹೋಗಬೇಡಿ ಅಂದಿದ್ದರು. ಪ್ರಿಯಾಂಕ್ ಖರ್ಗೆ ಅವರೇ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಸಹ ನನ್ನ ಬೆಂಬಲಿಸಿದ್ದಾರೆ. ಅದಕ್ಕೆ‌ ನಾನು ಮಾತನಾಡಿದ್ದೇನೆ ಅಂತಾ ಹೇಳಿದ್ದಾರೆ. ತಾಲಿಬಾನಿಯವರ ರೀತಿ ನಡೆಯುತ್ತಿದ್ದೀರಿ. ನಿಮಗೆ ತಾಕತ್, ಧಮ್ ಇದ್ದರೆ ಲಕ್ಷಾಂತರ ಎಕರೆ ಮುಸ್ಲಿಂ ಅಕ್ರಮ ಮಸಿದೀ,‌ ಮದರಸಾಗಳನ್ನು ನಿರ್ನಾಮ ಮಾಡಿ. ಆಮೇಲೆ ಆರ್​ಎಸ್​ಎಸ್​ ಬಗ್ಗೆ ಮಾತಾಡಿ” ಎಂದರು.‌


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ