ಅವ್ಯವಸ್ಥೆಯ ಆಗರವಾದ ಜಮಖಂಡಿ ಸರ್ಕಾರಿ ಆಸ್ಪತ್ರೆ
ಅವ್ಯವಸ್ಥೆಯ ಆಗರವಾದ ಜಮಖಂಡಿ ಸರ್ಕಾರಿ ಆಸ್ಪತ್ರೆಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೇ ಸ್ವಲ್ಪ ಗಮನಹರಿಸಿಆಸ್ಪತ್ರೆಯಲ್ಲಿ ದುರ್ನಾತನದ ನರಕ ದರ್ಶನನಿರ್ವಹಣೆಯ ಕೊರತೆಯಿಂದ ಜನರಲ್ಲಿ ಹೆಚ್ಚಿದ ರೋಗ ಭೀತಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಈ ಆಸ್ಪತ್ರೆ ಅನಾರೋಗ್ಯಕ್ಕೆ ತುತ್ತಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ದುರ್ನಾತದ ನರಕ ದರ್ಶನ ಮಾಡಿಸುತ್ತಿದೆ. ಇದು ಆಸ್ಪತ್ರೆಯೋ ತ್ಯಾಜ್ಯ ವಿಲೇವಾರಿ ಘಟಕವೋ ತಿಳಿಯದಾಗಿದೆ.
ಹೌದು, ಅನಾರೋಗ್ಯದಿಂದ ಬಳಲುತ್ತಿದ್ದವರ ಆರೋಗ್ಯವನ್ನು ಸರಿಪಡಿಸುವ ಬದಲೂ ಅನಾರೋಗ್ಯವನ್ನು ಹೆಚ್ಚಾಗುತ್ತದೆಯೋ ಏನೋ ಎಂಬ ಭೀತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಕಸದ ರಾಶಿ ಬಿದ್ದಿದ್ದು, ಕಶ್ಮಲ ತ್ಯಾಜ್ಯದಿಂದಾಗಿ ಇಡೀ ಆವರಣ ಗಬ್ಬು ನಾರುತ್ತಿದೆ. ಆಸ್ಪತ್ರೆ ಒಳಗೆ ಇರುವ ಕಸದ ಡಬ್ಬಿಗಳು ತುಂಬಿದ್ದರೂ ಸಹ ಸೂಕ್ತ ವಿಲೇವಾರಿ ಇಲ್ಲ. ಇದರಿಂದಾಗಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಮತ್ತು ಸಾರ್ವಜನಿಕರು ತೀವ್ರ ದುರ್ನಾತದ ಕಿರಿಕಿರಿ ಅನುಭವಿಸುವಂತಾಗಿದೆ. ಆಸ್ಪತ್ರೆಗೆ ಸೂಕ್ತ ನಿರ್ವಹಣೆಯ ಕೊರತೆಯಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಈ ಗಂಭೀರ ಸಮಸ್ಯೆಯ ಕುರಿತು ತಾಲ್ಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೆಯೇ ಆರೋಗ್ಯ ಇಲಾಖೆಯ ಟಿಎಚ್‌ಓ ಮತ್ತು ಡಿಎಚ್‌ಓ ಸಂಪೂರ್ಣ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ರೋಗಿಗಳಿಗೆ ಶುಚಿತ್ವ ಮತ್ತು ಉತ್ತಮ ಆರೋಗ್ಯ ವಾತಾವರಣ ಒದಗಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜಮಖಂಡಿ ಸರ್ಕಾರಿ ಆಸ್ಪತ್ರೆಯ ದುಸ್ಥಿತಿಯನ್ನು ಸರಿಪಡಿಸಲು ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Laxmi News 24×7