ಚಿಕ್ಕೋಡಿ:ಭ್ರೂಣ ಹತ್ಯೆ ಹೆಚ್ಚಾಗಿ ಆಗುತ್ತಿರುವುದು ಜೈನ ಸಮಾಜದಲ್ಲಿ. ಇದು ದೊಡ್ಡ ಆಘಾತಕಾರವಾದ್ದು. ಹಾಗಾಗಿ ಭ್ರೂಣ ಹತ್ಯೆ ಯಾರೂ ಮಾಡಬೇಡಿ ಎಂದು ಲಲಿತಾ ಎನ್ ಮಗದುಮ್ ಅವರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.
ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಪಾವನ ವರ್ಷಾಯೋಗ ನಿಮಿತ್ತಬಾಲಾಚಾರ್ಯ ಡಾ.ಶ್ರೀ ಸಿದ್ಧಸೇನ ಮುನಿಮಹಾರಾಜರ ನೇತೃತ್ವದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ದೊಡ್ಡವರು ಹೇಳಿದ ಹಾಗೆ ಧರ್ಮ ಉಳಿದಿದ್ದರೆ ಹೆಣ್ಣುಮಕ್ಕಳಿಂದ ಆದೇ ಹೆಣ್ಣುಮಕ್ಕಳು ಏಕೆಬೇಡ ? ಈ ಬಗ್ಗೆ ಪೋಷಕರು ಗಂಭೀರವಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಎದುರು ಹಣ ಎಣಿಸುವ ಕಾರ್ಯ ಮಾಡಬೇಡಿ. ಅವರು ದುಡಿದು ತಿನ್ನುವ ಬದಲು ನಿಮ್ಮ ಹಣ ಖರ್ಚು ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ. ಅವರಿಗೆ ಜವಾಬ್ದಾರಿ ಇಲ್ಲದಂತ್ತೆ ಆಗುತ್ತದೆ. ಹಾಗಾಗಿ ಅವರಿಗೆ ನಿಮ್ಮ ಕಷ್ಟು ಹೇಳಿ ಎಂದರು.
ಅಖಿಲ ಕರ್ನಾಟಕ ಮಹಿಳಾ ಉಪಾಧ್ಯಕ್ಷೆ ಚಂದ್ರಕಲಾ ಸೊಲ್ಲಾಪುರೆ ಮಾತನಾಡಿ, ಅಂದು ಹಿರಿಯರಿಗೆ ಗೌರವ ಕೊಡುವ ಮಕ್ಕಳಿದ್ದರು. ಇಂದು ಗೌರವ ಕೊಡುತ್ತಿಲ್ಲ. ಹಾಗಾಗಿ ಪೋಷಕರಾದವರು ಮಕ್ಕಳಿಗೆ ಸಂಸ್ಕೃತಿ ಕಲಿಸಬೇಕಿದೆ. ಸಿದ್ದ ಸೇನ ಮುನಿಮಹಾರಾಜರು ಅನೇಕ ಯುವಕರು ಕುಡಿತದ ಚಟದಿಂದ ಬಿಡಿಸಿದ್ದಾರೆ. ಅಲ್ಲದೇ ಅವರ ಸಮಾಜ ಕಟ್ಟುವ ಕೆಲಸ ಎಲ್ಲರೂ ಮೆಚ್ಚುವಂತದ್ದು ಎಂದರಲ್ಲದೇ ಸಂಸ್ಕೃತಿಯ ಪಾಠವನ್ನೂ ಭೋಧಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀನಶ್ರೀ ಅಭಿನಂದನ ಪಾಟೀಲ ಅವರು, ಜೈನ ಧರ್ಮ ಹುಟ್ಟಿಕೊಂಡಿತೋ ಅಂದೇ ಅಪ್ಡೇಟ್ ಆಗಿದೆ. ಆದರೆ ಕೆಲ ಆಚಾರ ವಿಚಾರ ಬದಲಿಯಾಗಿರಬಹುದು. ಧರ್ಮಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಧರ್ಮದ ಜಾಗೃತಿ ಮೂಡಿಸಬೇಕು ಎಂದರಲ್ಲದೇ ಕಾಲಕ್ಕೆ ತಕ್ಕ ಮಕ್ಕಳು ಬದಲಾಗಬೇಕು. ಆದರೆ ಸಂಸ್ಕೃತಿ ಆಚಾರ ವಿಚಾರ ಮರೆಯಬಾರದ ಹಾಗೇ ಪೋಷಕರು ಬೆಳೆಸಬೇಕು ಎಂದರು.
ಪ್ರೇರಣಾ ಧೂಳಗೌಡ ಪಾಟೀಲ, ಡಾ. ಸ್ನೇಹಾ ಪಾಟೀಲ ಸೇರಿದಂತೆ ಅನೇಕ ಶ್ರಾವಕಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಶ್ರೀ ಸಿದ್ಧಸೇನ ಮುನಿಮಹಾರಾಜರಿಂದ ಅಶಿರ್ವಚನ ನೀಡಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಸಂದರ್ಭದಲ್ಲಿ ವಿಲಾಸಮತಿ ಈರಗೌಡ ಪಾಟೀಲ, ಸುರೇಖಾ ಗೌರಗೌಂಡ, ವೈಶಾಲಿ ಭರತೇಶ ಬನವಣೆ, ನೀತಾ ಪಾಟೀಲ, ಶಕುಂತಲಾ ಕಾಂತೆ, ಶಕುಂತಲಾ ಹಂಜೆ, ಪದ್ಮಾವತಿ ಖೆಮಲಾಪುರೆ ಸೇರಿದಂತೆ ಬಾಗಲಕೋಟ, ಬೆಳಗಾವಿ, ಧಾರವಾಡ, ವಿಜಯಪುರ ನೂರಾರು ಮಹಿಳೆಯರು ಹಾಗೂ ಚಾತುರ್ಮಾಸಕಮಿಟೊ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ವಿದ್ಯಾ ಪಾಟೀಲ ಸ್ವಾಗತಿಸಿದರು. ವೀರಶ್ರೀ ಸಮಾಜೆ ನಿರೂಪಿಸಿದರು. ಸಾಧನಾ ಪಾಟೀಲ ವಂದಿಸಿದರು.
Laxmi News 24×7