Breaking News

ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ‌.‌..

Spread the love

ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ಮಾದರಿಯನ್ನಾಗಿಸಲು ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ ಹೇಳಿದರು. ಭಾನುವಾರ ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿವೊಂದು ರಸ್ತೆ,ಚರಂಡಿ,ನೀರಾವರಿ,ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎಂದರು.ವಿಶ್ವೇಶ್ವರಯ್ಯ ನಗರ ಹಾಗೂ ಕುವೆಂಪು ಮತ್ತು ಸಂಗೊಳ್ಳಿ ರಾಯಣ್ಣಾ ನಗರಕ್ಕೆ 90 ಲಕ್ಷ ಅನುದಾನ ಮಂಜೂರಾಗಿದೆ.ಇಲ್ಲಿ ರಸ್ತೆ ನಿರ್ಮಾಣ ಮಾಡುವಂತೆ ಹಲವಾರು ದಿನಗಳಿಂದ ಜನರ ಬೇಡಿಕೆಯಾಗಿತ್ತು.ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಹಿರಿಯ ಪತ್ರಕರ್ತ ಹಾಗೂ ವಿಶ್ವೇಶ್ವರಯ್ಯಾನಗರದ ನಿವಾಸಿಯಾದ ಸಂಜೀವ ಕಾಂಬಳೆ ಮಾತನಾಡಿ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದಾಗ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ನಗರಕ್ಕೆ ರಸ್ತೆ ಹಾಗೂ ಮೂಲಭೂತ ಸೌಕರ್ಯಕ್ಕೆ 90 ಲಕ್ಷ ಅನುದಾನ ನೀಡಿರುವದಕ್ಕೆ ಅವರು ನಗರದ ನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸಿದರು.ಶ್ರೀ.ಆಂಜನೆಯ ದೇವಸ್ಥಾನಕ್ಕೆ ಬೋರವೆಲ್ ಹಾಗೂ ನಗರಕ್ಕೆ ವಿವಿಧ ಅಭಿವೃದ್ದಿಗೆ ಇನ್ನು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಮುಖಂಡ ಸುರೇಶ ಚೌಗಲಾ ಮಾತನಾಡಿ,ನಮ್ಮ ಶಾಸಕರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿ ಕಾರ್ಯ ಮಾಡುತ್ತಿದ್ದಾರೆ ಎಂದರು.ಗಣೇಶ ಹುಕ್ಕೇರಿ ಅವರು ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರೇಕೋಡಿ ಗ್ರಾಮ ಪಂಚಾಯತ ಅಧ್ಯಕ್ಷೆ ರಮಾದೇವಿ ಮುಕುಂದ, ಅನೀಲ‌ ಮಾನೆ,ಗುಲಾಬ ಹುಸೇನ ಬಾಗವಾನ,ಸತೀಶ ದಾಮನ್ನವರ,ಗ್ರಾಮ ಪಂಚಾಯತ ಸದಸ್ಯರಾದ ಬಾಬಾಸಾಹೇಬ ಗುಡಿಮನಿ,ರಾಮಾ ಬಂಡಗರ,ಶಂಕರ ಠೊಣ್ಣೆ,ಪಪ್ಪು ಪಟೇಲ್,ನಿಜಾಮ ಪಟೇಲ,ದಾದಾ ಪಟೇಲ,ಅಜರುದ್ದಿನ ಪಟೇಲ್,ತಾ.ಪಂ ಮಾಜಿ ಸದಸ್ಯ ಸುರೇಶ ಚೌಗಲಾ,ರೋಹಿತ ಮುಕುಂದ,ಪ್ರಮೋದ ದಾಮನ್ನವರ,
ಅನಸರ ಮುಜಾವರ,ಭೀಮಾ ಕಟ್ಟಿ,ಶಿವಪ್ಪಾ ಬಾಗನೆ,ಸಂಜೀವ ಕಾಂಬಳೆ,
ಅಜೀತ ಸಣ್ಣಕ್ಕಿ,ಪಂಕಜ ಆನೂರೆ,ದಯಾನಂದ ಪೂಜಾರಿ,ಪ್ರವೀಣ ಪಾಟೀಲ,ಮಾಣಿಕ ಕಾಂಬಳೆ,ರಂಜೀತ ಕಾರಣಿಕ,ಗುತ್ತಿಗೆದಾರ ಸಂಗ್ರಾಮ ಪೂಜಾರಿ,ನಿಹಾಲ ಮಾಳಿ ಉಪಸ್ಥಿತರಿದ್ದರು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ