Breaking News

ಸಿನಿಮಾ ನೋಡಲು ಹೋದವರು ನೀರುಪಾಲು

Spread the love

ರಾಯಚೂರು: ಕಾಲುವೆಗೆ ಈಜಲು ಹೋದಾಗ ನಾಪತ್ತೆಯಾದ ಇಬ್ಬರು ಯುವಕರು ಶವವಾಗಿ ಪತ್ತೆಯಾದ ಯುವಕರ ಸಾವಿನ ಕುರಿತು ಸಂಶಯ ವ್ಯಕ್ತವಾಗಿ‌ ಮಸ್ಕಿ ಠಾಣೆಯಲ್ಲಿ ದೂರು‌‌‌ ದಾಖಲಾಗಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ನಿವಾಸಿಗಳಾದ ಯಲ್ಲಾಲಿಂಗ ಹಾಗೂ ವೆಂಕಟೇಶ ಇಬ್ಬರು ಯುವಕರು ಮುದಗಲ್‌ನಿಂದ ಮಸ್ಕಿ ಪಟ್ಟಣಕ್ಕೆ ಕಾಂತಾರ ಸಿನಿಮಾ ನೋಡಲು ಬಂದಿದ್ದರು. ಆದ್ರೆ ಸಿನಿಮಾ‌ ಟಿಕೆಟ್ ಸಿಗಲಿಲ್ಲವೆಂದು ಮಸ್ಕಿ ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಗೆ‌ ಈಜಲು ತೆರಳಿದ್ದರು. ಈ ವೇಳೆ ಯಲ್ಲಾಲಿಂಗ ಹಾಗೂ ವೆಂಕಟೇಶ ಕಾಲುವೆಯಲ್ಲಿ ಶನಿವಾರದಂದು ಕಾಣೆಯಾಗಿದ್ದರು.

ವಿಷಯ ತಿಳಿದ ಮಸ್ಕಿ ಪೊಲೀಸರು ಇಬ್ಬರು ಯುವಕರ ಹುಡಕಾಟ ನಡೆಸಿದರು. ಆದ್ರೆ ಸಂಜೆಯ ವೇಳೆ ನಾಪತ್ತೆಯಾಗಿದ್ದರಿಂದ ಅಂದು ಶೋಧ ಕಾರ್ಯ ಮೊಟಕುಗೊಳಿಸಿ, ರವಿವಾರದಂದು ಅಗ್ನಿಶಾಮಕ ಹಾಗೂ ಪೊಲೀಸರು ‌ಪುನಃ ಶೋಧ ಕಾರ್ಯಾಚರಣೆ ನಡೆಸಿದ್ದಾಗ 76ನೇ ಕಾಲುವೆಯ ಬಳಿ‌ ಕಾಣೆಯಾದ ಯುವಕರು ಶವವಾಗಿ ಪತ್ತೆಯಾದ್ದರು. ಮಕ್ಕಳನ್ನು ಕಳೆದುಕೊಂಡು ಪೊಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಆಗ ಪೊಲೀಸರು ಇಬ್ಬರು ಯುವಕರ ಮೃತದೇಹವನ್ನು ಹೊರತೆಗೆದು ಲಿಂಗಸೂಗೂರು ‌ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಆದ್ರೆ ಮೃತ ಯುವಕರನ್ನು ಕಂಡ ಪೋಷಕರು, ದೇಹದ ಕೆಲ‌ ಭಾಗಗಳಲ್ಲಿ ಗಾಯಗಳು ಕಂಡು ಬಂದಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಸ್ಕಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಂತರ ಸತ್ಯ ಬಯಲಿಗೆ ಬರಲಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ