Breaking News

ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು.

Spread the love

ಹುಕ್ಕೇರಿ : ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು.
ನಮ್ಮ ನಮ್ಮ ಮನೆಯ ದೇವರನ್ನು, ಗುರು ಮಠಗಳನ್ನು ಊರಿನ ಪರಂಪರೆಯನ್ನು ಬೀಡಬೇಡಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ದಸರಾ ಸಂದೇಶ ನೀಡಿದರು.
ಹುಕ್ಕೇರಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಹಿರೇಮಠದ ದಸರಾ ಉತ್ಸವದಲ್ಲಿ ಗುಡ್ಡಾಪೂರ ದಾನಮ್ಮಾ ದೇವಿ ಪುರಾಣ ಪ್ರವಚನ, ಚಂಡಿಕಾ ಹೋಮ, ಗುರುಶಾಂತೇಶ್ವರ ರಥೋತ್ಸವ ಹಾಗೂ ದೇವಿ ಪಲ್ಲಕ್ಕಿ ಉತ್ಸವ ,ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕೋನೆಯ ದಿನ ಅಂತೂರು ಬೆಂತೂರು ಕುಮಾರ ಸ್ವಾಮಿಗಳಿಗೆ ಪ್ರವಚನ ಪುರುಷೋತ್ತಮ ಪ್ರಶಸ್ತಿ ಹಾಗೂ ನಿಶಾಂತ ಶಾಸ್ತ್ರಿ ಮತ್ತು ಸಂಪತ್ತ ಕುಮಾರ ಶಾಸ್ತ್ರಿಗಳಿಗೆ ಸತ್ಕರಿಸಿ ಅಭಿನಂದಿಸಲಾಯಿತು ಮತ್ತು ಚಿಕ್ಕೋಡಿ ಮಹಿಳಾ ವೇದ ಮೂರ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಶ್ರೀಗಳಿಗೆ ಬಂಗಾರ ಕೀರಿಟ ಧಾರಣೆ ಮಾಡಿ ಕಿರೀಟ ಪೂಜೆ ಮಾಡಲಾಯಿತು.
ಪ್ರತಿ ದಿನ ನಗರದ ಕಾರಂಜಿಯಲ್ಲಿ ಗಂಗಾರತಿ ಮಾಡುವ ಮೂಲಕ ದೇವಿಗೆ ವಿಷೇಶ ಪೂಜಾ ಕೈಂಕರ್ಯಗಳು ಜರುಗಿದವು.
ಗುರುವಾರ ಸಾಯಂಕಾಲ ದಸರಾ ಕೊನೆಯ ದಿನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಶ್ರೀ ಮಠದಿಂದ ನಗರದ ಹೋರವಲಯದ ಬನ್ನಿ ಮಂಟಪಕ್ಕೆ ತೇರಳಿ ಶಮಿ ಮರಕ್ಕೆ ಹೋಮ ಯಜ್ಞ ಯಾಗಾದಿ ಜರುಗಿಸಿ ಪೂಜೆ ಸಲ್ಲಿಸಿದರು.
ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ ಮಹಾಸ್ವಾಮಿಗಳು ನಮ್ಮ ನಮ್ಮ ಮನೆಯ ದೇವರನ್ನು ಗ್ರಾಮದ ಗುರು ಮಠಗಳನ್ನು ಹಾಗೂ ನಾಡಿನ ಪರಂಪರೆಯನ್ನು ಬಿಡಬೇಡಿ,ಹುಕ್ಕೇರಿ ಹಿರೇಮಠ ಭಾವೈಕ್ಯ ದಿಂದ ಕೂಡಿದೆ ಕಾರಣ ನಿಮ್ಮ ಮನೆ ದೇವರನ್ನು ,ದೈವವನ್ನು, ಮನೆಯ ಹಿರಿಯರನ್ನು , ಊರಿನ ಪರಂಪರೆಯನ್ನು ಗೌರವಿಸಿದರೆ ಮಾತ್ರ ಶಾಂತಿ ಲಭಿಸುವದು ಎಂದರು
ನಂತರ ವಿರಾಜಪೇಟೆಯ ದಿವಾಕರ ಭಟ್ಟ ಮಾತನಾಡಿ ನಾವುಗಳು ನಮ್ಮ ಮನೆಯ ದೇವರುಗಳನ್ನು ಬಿಟ್ಟು ಇನ್ನೊಂದು ದೇವರಿಗೆ ಮೋರೆ ಹೊಗುತ್ತಿದ್ದೆವೆ ಅದನ್ನು ತಡೆಗಟ್ಟಿ ಹಿಂದೂಗಳು ಎಲ್ಲಾ ದೇವರು ಒಂದೆ ಎಂಬ ಭಾವ ಹೊಂದಬೇಕು ಎಂದರು
ಅಡ್ಡಪಲ್ಲಕ್ಕಿ ಯಲ್ಲಿ ವೀರಾಜಮಾನವಾಗಿ ಕುಳಿತ ಶ್ರೀಗಳನ್ನು ಹಕ್ಕುದಾರರು, ಆಸ್ತಾನ ಸೇವಕರು ಮಠದ ಸಾವಿರಾರು ಭಕ್ತರು ವಾದ್ಯ ಮೇಳಗಳೊಂದಿಗೆ ಕುದುರೆ ಸಾರೋಟಗಳಲ್ಲಿ ಆಗಮಿಸಿದ ಭಕ್ತ ಸಮೂಹ ಶಮೋಲ್ಲಂಗನೆ ಮಾಡುವ ಮೂಲಕ ಒಂಬತ್ತು ದಿನಗಳ ದಸರಾ ಉತ್ಸವಕ್ಕೆ ತೇರೆ ಎಳೆಯಲಾಯಿತು.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ