ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ರಾಜ್ಯದ ನಾನಾ ಜಿಲ್ಲೆಗಳ ಸ್ತಬ್ಧಚಿತ್ರಗಳು ಅತ್ಯಂತ ಆಕರ್ಷಣೆಯಾಗಿದ್ದು, ಅವುಗಳಲ್ಲಿ ರೈಲ್ವೆ ಇಲಾಖೆ ಸ್ತಬ್ಧಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ. 30 ಜಿಲ್ಲೆಗಳ ಸ್ತಬ್ಧಚಿತ್ರಗಳು ಸೇರಿದಂತೆ ವಿವಿಧ ನಿಗಮ, ಇಲಾಖೆಗಳ 35ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುತ್ತಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಕ್ತಿ ಯೋಜನೆಯ ಯಶೋಗಾಥೆ, ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ವಿಜಯದ ರನ್ವೇ ಭಾರತದ ಆಕಾಶಕ್ಕೆ ಎಚ್ಎಎಲ್ನ ಶಕ್ತಿ, ಭಾರತೀಯ ರೈಲ್ವೆ ಇಲಾಖೆ ಚೆನಾಬ್ ಸೇತುವೆ ಹಾಗೂ ಪಂಬನ್ ಸೇತು, ಭೋವಿ ಅಭಿವೃದ್ಧಿ ನಿಗಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆ, ನಗರಾಭಿವೃದ್ಧಿ ಇಲಾಖೆ ಸ್ಮಾರ್ಟ್, ಶುದ್ಧ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಮಾದರಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಭೂತಪೂರ್ವ ಸಾಧನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡ್ರಗ್ಸ್ ಮುಕ್ತ ಕ್ಯಾಂಪಸ್ ಹಾಗೇ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಅವರಿಂದರಲೂ ಮಾದರಿ ಪ್ರದರ್ಶನ ನಡೆಯುತ್ತಿದೆ.
ಕೆಲವು ಜಿಲ್ಲೆಗಳ ಥೀಮ್ ಹೀಗಿದೆ:
- ಮಂಡ್ಯ ಜಿಲ್ಲೆ- ಸ್ವಾತಂತ್ರ್ಯ ಹೋರಾಟದ ದೀಪ – ಶಿವಪುರದ ಧ್ವಜ ಸತ್ಯಾಗ್ರಹ.
- ಚಿಕ್ಕಬಳ್ಳಾಪುರ ಜಿಲ್ಲೆ- ಜ್ಞಾನಿ – ವಿಜ್ಞಾನಿಗಳ ನಾಡು.
- ಧಾರವಾಡ ಜಿಲ್ಲೆ- ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ.
- ಉತ್ತರಕನ್ನಡ ಜಿಲ್ಲೆ- ರಾಣಿ ಚೆನ್ನಭೈರದೇವಿ – ಮಸಾಲೆ ರಾಣಿ.
- ಬಾಗಲಕೋಟೆ ಜಿಲ್ಲೆ- ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು.
- ಕೊಪ್ಪಳ ಜಿಲ್ಲೆ- ಕಿನ್ನಾಳ ಕಲೆ.
- ಶಿವಮೊಗ್ಗ ಜಿಲ್ಲೆ- ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ.
- ಬಳ್ಳಾರಿ ಜಿಲ್ಲೆ- ಸೆಪ್ಟೆಂಬರ್ನಲ್ಲಿ ಸಂಡೂರು ನೋಡು.
- ವಿಜಯಪುರ ಜಿಲ್ಲೆ- ಶಿವನ ಪ್ರತಿಮೆ ಶಿವಗಿರಿ ವಿಜಯಪುರ.
- ದಕ್ಷಿಣ ಕನ್ನಡ ಜಿಲ್ಲೆ- ಪ್ರತಿಬಿಂಬಿಸುವ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ.
- ಕಲಬುರಗಿ ಜಿಲ್ಲೆ- ಶರಣಬಸವೇಶ್ವರ ಸಂಸ್ಥಾನ, ಮಹಾದಾಸೋಹಿ ಪೀಠ ಮತ್ತು ಬಹುಮನಿ ಸುಲ್ತಾನ ಸಾಮ್ರಾಜ್ಯ.
- ತುಮಕೂರು ಜಿಲ್ಲೆ- ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ- ನಮ್ಮ ತುಮಕೂರು ಜಿಲ್ಲೆ.
- ಉಡುಪಿ ಜಿಲ್ಲೆ- ಸ್ವಚ್ಛ ಉಡುಪಿ.
- ಕೊಡಗು ಜಿಲ್ಲೆ- ಕೊಡಗಿನ ಚಾರಣ ಪಥಗಳು.
- ಹಾವೇರಿ ಜಿಲ್ಲೆ- ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹಾದೇವ.
- ಬೆಂಗಳೂರು ಗ್ರಾಮಾಂತರ ಜಿಲ್ಲೆ- ಘಾಟಿ ಸುಬ್ರಮಣ್ಯ ದೇವಸ್ಥಾನ, ದೇವನಹಳ್ಳಿ ಕೋಟಿ ಮತ್ತು ಕೆಂಪೇಗೌಡರ ವಿಗ್ರಹ.
- ಚಿಕ್ಕಮಗಳೂರು ಜಿಲ್ಲೆ- ಭದ್ರಬಾಲ್ಯ ಯೋಜನೆ.
- ಗದಗ ಜಿಲ್ಲೆ- ಜೋಡು ಕಳಸದ ಗುಡಿ.
- ರಾಮನಗರ ಜಿಲ್ಲೆ- ಚನ್ನಪಟ್ಟಣ ಗೊಂಬೆ, ಹೈನುಗಾರಿಕೆ ರೇಷ್ಮೆ.
- ಮೈಸೂರು ಜಿಲ್ಲೆಯ ಬದನವಾಳು ನೂಲುವ ಪ್ರಾಂತ್ಯ.
Laxmi News 24×7