Breaking News

ಎರಡನೇ ದಿನವೂ ತಾಂತ್ರಿಕ ದೋಷ, ಆಮೆಗತಿ; ಸುಮಾರು 71,004 ಜನರ ಸಮೀಕ್ಷೆ ಪೂರ್ಣ

Spread the love

ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿ ಎರಡು ದಿನವಾಗಿದ್ದು, ಇಂದು(ಮಂಗಳವಾರ) ಸಂಜೆ 6 ಗಂಟೆವರೆಗೆ ಕೇವಲ 71,004 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಗಾಗಿ ಸಿದ್ಧಪಡಿಸಿದ ಆ್ಯಪ್ ನಲ್ಲಿ ತಾಂತ್ರಿಕ ದೋಷ, ಸರ್ವರ್ ಡೌನ್ ಸಮಸ್ಯೆಗಳು ಮುಂದುವರಿಯಿತು.

ಮೊದಲ ದಿನವಾದ ಸೋಮವಾರ ಆ್ಯಪ್ ತಾಂತ್ರಿಕ ದೋಷ, ಗೊಂದಲ, ಸರ್ವರ್ ಡೌನ್, ಸಮೀಕ್ಷಾದಾರರ ಕೈಗೆ ಸಿಗದ ಕೈಪಿಡಿ ಹೀಗೆ ಹಲವು ವಿಘ್ನಗಳೊಂದಿಗೆ ಸಮೀಕ್ಷೆ ಮಂದಗತಿಯಲ್ಲಿ ನಡೆದಿತ್ತು. ಹಾಗಾಗಿ, ಕೇವಲ 2,765 ಕುಟುಂಬಗಳ ಸುಮಾರು 10,600 ಜನರನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲು ಸಾಧ್ಯವಾಗಿತ್ತು.

ಮಂಗಳವಾರವೂ ಸರ್ವೆ ಕಾರ್ಯದಲ್ಲಿ ದೊಡ್ಡ ಪ್ರಗತಿ ಕಂಡಿಲ್ಲ. ತಾಂತ್ರಿಕ ಸಮಸ್ಯೆ, ಸರ್ವರ್ ಡೌನ್ ನಿಂದಾಗಿ ಸಮೀಕ್ಷೆ ನಿರೀಕ್ಷಿತ ವೇಗ ಕಂಡಿಲ್ಲ. ಹೀಗಾಗಿ, 60,362 ಜನಸಂಖ್ಯೆಯ ಸಮೀಕ್ಷೆ ಮಾಡಲಾಗಿದೆ. ಅಂದರೆ ಎರಡನೇ ದಿನ 15,722 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮೊದಲ ದಿನಕ್ಕಿಂತ ಸಮೀಕ್ಷೆಯಲ್ಲಿ ಚೇತರಿಕೆ ಕಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಎರಡು ದಿನಗಳಲ್ಲಿ 18,487 ಕುಟುಂಬಗಳೊಂದಿಗೆ 71,004 ಜನಸಂಖ್ಯೆಯ ಸಮೀಕ್ಷೆ ಮುಗಿಸಲಾಗಿದೆ.

ಸಮೀಕ್ಷೆಗೆ 1.70 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗಿದೆ.‌ ಪ್ರತಿ ಗಣತಿದಾರರಿಗೆ 120-150 ಮನೆಗಳನ್ನು ನಿಗದಿ ಮಾಡಲಾಗಿದೆ. ಆ ಮೂಲಕ 16 ದಿನಗಳಲ್ಲಿ 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಒಳಪಡಿಸಬೇಕಾಗಿದೆ.

ಗಣತಿದಾರರು ನೆಟ್ ವರ್ಕ್ ಸಮಸ್ಯೆಯಿಂದ ಆಪ್ ಡೌನ್ ಲೋಡ್ ಮಾಡಲು ಪರದಾಡುತ್ತಿದ್ದಾರೆ. ಲಾಗ್‌ಇನ್ ಆಗಲು ಒಟಿಪಿ ಸಿಗುತ್ತಿರಲಿಲ್ಲ. ಕೆಲವು ಕಡೆ ಗಣತಿದಾರರ ಮೊಬೈಲ್‌ ಕೈ ಕೊಡುವುದು, ಆ್ಯಪ್‌ ಗೆ ಅಗತ್ಯ ಸ್ಟೋರೇಜ್‌ ಇಲ್ಲದಿರುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರಿದವು. ಹೀಗಾಗಿ ಸಮೀಕ್ಷೆ ಆಮಗತಿಯಲ್ಲೇ ಸಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ