ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಜ್ಯಮಟ್ಟದ ಸಮಾಜ ಸೇವಾರತ್ನ ಪ್ರಶಸ್ತಿ
-ಖಾನಾಪೂರದ ಇನ್ ನ್ಯೂಸ್ ರಿಪೋರ್ಟರ್ ಅಲ್ತಾಫ್ ಮಹಮ್ಮದ್ ಇಕ್ಬಾಲ್ ಬಸರೀಕಟ್ಟಿ ಅವರಿಗೆ ರಾಜ್ಯಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕಲಾ ಕೌಸ್ತುಭ ಸಂಸ್ಥೆ ದಾಂಡೇಲಿ ಅವರು ಹುಬ್ಬಳ್ಳಿಯ ನಿರಂಜನ ಹಾಲ್, ಸಿದ್ಧಾರೂಢ ಮಠ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಸಮಾರಂಭದಲ್ಲಿ ವಿವಿಧ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು ಇದರಲ್ಲಿ ನಮ್ಮ ಇನ್ ನ್ಯೂಸ್ ಖಾನಾಪೂರ ರಿಪೋರ್ಟರ್ ಅಲ್ತಾಫ್ ಮಹಮ್ಮದ್ ಇಕ್ಬಾಲ್ ಬಸರೀಕಟ್ಟಿ ಅವರಿಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ದನ್ನು ಗಮನಿಸಿ ಈ ಪ್ರಶಸ್ತಿ ವಿತರಣೆ ಮಾಡಿ ಗೌರವಿಸಿತ್ತು ಈ ಸಂದರ್ಭದಲ್ಲಿ ಕಲಾ ಕೌಸ್ತುಭ ಸಂಸ್ಥೆಯ ಅಧ್ಯಕ್ಷರಾದ ಮಾಜಿ ದಾಂಡೇಲಿ ನಗರಸಭೆ ಅಧ್ಯಕ್ಷ ಗೋವಿಂದ ಮೇಲಗೇರಿ, ಹಿರಿಯ ಸಾಹಿತಿಗಳಾದ ಡಾಕ್ಟರ್ ಅಜನಾಳ ಭೀಮಾಶಂಕರ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಖಾನಾಪೂರ ತಾಲೂಕಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಂದರಗಿ ಅವರಿಗೆ ರಾಜ್ಯ ಮಟ್ಟದ ಶಿಕ್ಷಕರತ್ನ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ, ಖಾನಾಪೂರ ತಾಲೂಕಾ ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷೆ, ಬೀಡಿ ಗ್ರಾಮ ಪಂಚಾಯಿತಿ ಸದಸ್ಯೆ ದೀಪಾ ಪಾಟೀಲ ಅವರಿಗೆ ಕರ್ನಾಟಕ ಭೂಷಣ ಸೇವಾ ರತ್ನ ಪ್ರಶಸ್ತಿ, ಖಾನಾಪೂರ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಮೇಘಾ ಕುಂದರಗಿ ಅವರಿಗೆ ರಾಷ್ಟ್ರೀಯ ಸಮಾಜ ರತ್ನ ಸೇವಾ ಪ್ರಶಸ್ತಿ, ಹಲಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಂತೋಷ್ ಹಂಜಿ ಅವರಿಗೆ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ,
ಐಎನ್ ಟಿಯುಸಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮತ್ತು ನಂದಗಡ ಗ್ರಾಮ ಪಂಚಾಯಿತಿ ಸದಸ್ಯೆ ವೈಷ್ಣವಿ ಪಾಟೀಲ ಅವರಿಗೆ ಕರ್ನಾಟಕ ಭೂಷಣ ಸೇವಾ ರತ್ನ ಪ್ರಶಸ್ತಿ, ಖಾನಾಪೂರ ಪಟ್ಟಣ ಪಂಚಾಯಿತಿ ಸದಸ್ಯ ಅಭಿಷೇಕ ಹೊಸಮನಿ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ಹಾಗೂ ಖಾನಾಪೂರ ಸಿಟಿ ಯುವ ಕಾಂಗ್ರೆಸ್ ಅಧ್ಯಕ್ಷ,ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ರೇಖಾ ನಾಯ್ಕರ ಅವರಿಗೂ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
Laxmi News 24×7