ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಕಬ್ಬು ಉತ್ಪಾದನೆ ಹೆಚ್ಚಿಸುವ ಕುರಿತು ಒಂದು ದಿನದ ವಿಚಾರ ಸಂಕಿರಣ….
ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ
ಕಬ್ಬು ಉತ್ಪಾದನೆ ಹೆಚ್ಚಿಸುವ ಒಂದು ದಿನದ ವಿಚಾರ ಸಂಕಿರಣ
ರಾಜ್ಯದ ವಿವಿಧ ಕೃಷಿ ತಜ್ಞರಿಂದ ವಿಚಾರ ಮಂಡನೆ
ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿಗಳು ಭಾಗಿ
ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಫಲವತ್ತತೆಗೆ ಒತ್ತು ಕೊಡದೇ ಕೃಷಿಯಲ್ಲಿ ಕೇವಲ ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಮತ್ತು ವ್ಯತಿರಿಕ್ತವಾಗಿ ಹೆಚ್ಚಿನ ನೀರು ಬಳಕೆ ಮಾಡುವುದರಿಂದ ಮಣ್ಣಿನ ಗುಣಧರ್ಮ ಹಾಳುಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೊಳೆಕರ ಹೇಳಿದರು.
ಅವರು ಗುರುವಾರ ಬೆಳಗಾವಿ ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ, ತಮಿಳುನಾಡಿನ ಮುರಗಪ್ಪ ವಾಟರ್ ಟೆಕ್ನಾಲಾಜಿ ಮತ್ತು ಸೊಲ್ಯುಶನ್ಸ್ ಕಂಪನಿ ಸಹಯೋಗದಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿ, ಸಿಬ್ಬಂದಿಯವರಿಗೆ ಎರ್ಪಡಿಸಿದ್ದ ಕಬ್ಬು ಉತ್ಪಾದನೆ ಹೆಚ್ಚಿಸಲು ಸಮಸ್ಯಾತ್ಮಕ ಮಣ್ಣು ನಿರ್ವಹಣೆ ಹಾಗೂ ಕುಳೆ ಕಬ್ಬು ನಿರ್ವಹಣೆ ಕುರಿತು ಜರುಗಿದ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಬೆಳೆ ಇಳುವರಿ ಕುಂಠಿತಗೊಳ್ಳುವುದಲ್ಲದೇ ಜವಳು ಮತ್ತು ಸವಳು ಹೆಚ್ಚಾಗುತ್ತಿದೆ. ಕಾರಣ, ಕೃಷಿ ಜೊತೆಗೆ ಹೈನುಗಾರಿಕೆ, ಇತರೆ ಸಾವಯವ ಉತ್ತೇಜಿತ ಕಾರ್ಯಕ್ರಮಗಳನ್ನು ರೈತರು ಅನುಸರಿಸಿ ಮಣ್ಣಿನ ಫಲವತ್ತತೆ ಕಾಯ್ದುಕೊಂಡು ಸುಸ್ಥಿರ ಕೃಷಿ ಹಾಗೂ ಆರೋಗ್ಯ ಭದ್ರತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ರಾಜಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೇತನಾ ಪಾಟೀಲ, ಜಯತೀರ್ಥ ನಾಡಿಗೇರ, ಡಾಕ್ಟರ್ ಎಸ್. ಎಸ್. ನೂಲಿ, ಡಾಕ್ಟರ್ ವ್ಹಿ.ಜಿ ಯಡಹಳ್ಳಿ, ರಮೇಶ ಧನವಾಡೆ, ಪೌಲುಮಿ, ಸಕ್ಕರೆ ಸಂಸ್ಥೆಯ ಆರ್.ಬಿ. ಸುತಗುಂಡಿ, ಡಾಕ್ಟರ್ ಸಂತೋಷಕುಮಾರ ಪೂಜೇರಿ, ಸಚಿನಕುಮಾರ ಘಟಕಾಂಬಳೆ ಸೇರಿದಂತೆ ಮುಂತಾದವರಿದ್ದರು.ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ 110 ಕ್ಕೂ ಅಧಿಕ ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿಗಳು/ಸಿಬ್ಬಂದಿಯವರು ಭಾಗವಹಿಸಿದ್ದರು.
Laxmi News 24×7