ಅನಾರೋಗ್ಯದ ಹಿನ್ನೆಲೆ ಶಿರೂರ ಪಟ್ಟಣದ ಯೋಧ ರಮೇಶ ಬಾದಾಮಿ ಸಾವು…
ಅನಾರೋಗ್ಯದ ಹಿನ್ನೆಲೆ ಶಿರೂರ ಪಟ್ಟಣದ ಯೋಧ ಸಾವು
ಗ್ರಾಮಸ್ಥರಿಂದ ಬೈಕ್ ರ್ಯಾಲಿ, ಭಾರತ ಮಾತ ಕಿ ಜೈ ಘೋಷಣೆ
ಶಿರೂರು ಪಟ್ಟಣ ತಲುಪಿದ ಯೋಧನ ಪಾರ್ಥಿವ ಶರೀರ
ಶಿರೂರು ಪಟ್ಟಣದ ರಮೇಶ್ ಬಾದಾಮಿ(42) ಮೃತ ಯೋಧ
ಜಮ್ಮು ಕಾಶ್ಮೀರದ ಶ್ರೀನಗರದ ಬಿ.ಎಸ್.ಎಫ್ ನ 80 ನೇ ಬಟಾಲಿಯನ್ನಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯೋಧ ರಮೇಶ ಬಾದಾಮಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಬಾಗಲಕೋಟೆ ತಾಲ್ಲೂಕಿನ ಶಿರೂರು ಪಟ್ಟಣದ 45 ವರ್ಷದ ರಮೇಶ ಬಾದಾಮಿ ಜಮ್ಮು ಕಾಶ್ಮೀರದ ಶ್ರೀನಗರದ ಬಿ.ಎಸ್.ಎಫ್ ನ 80 ನೇ ಬಟಾಲಿಯನ್ನಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಕಳೆದ 3 ತಿಂಗಳ ಹಿಂದೆ ಬ್ರೇನ್ ಟ್ಯೂಮರ್ಗೆ ಒಳಗಾಗಿ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸೋಮವಾರ ಯೋಧ ರಮೇಶ ಬಾದಾಮಿ ಮೃತಪಟ್ಟಿದ್ದಾರೆ.
ಶಿರೂರ ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಬೈಕ್ ರ್ಯಾಲಿ ನಡೆಸಿ, ಭಾರತ ಮಾತ ಕಿ ಜೈ ಘೋಷಣೆಗಳನ್ನು ಕೂಗಿದರು. ಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಪಾರ್ಥಿವ ಶರೀರ ಕಂಡು ಪತ್ನಿ,ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಬಿಎಸ್ಎಫ್ ಯೋಧರ ಸಮ್ಮುಖದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
Laxmi News 24×7