Breaking News

ಬೆಳಗಾವಿಯಲ್ಲಿ ಗಣಪತಿ ವಿಸರ್ಜನೆ ಮದ್ಯ ಬಂದ್ ಹಿನ್ನೆಲೆ: ಅಬಕಾರಿ ಅಧಿಕಾರಿಗಳಿಂದ ಅಕ್ರಮ ಗೋವಾ ಮದ್ಯ ವಶ…

Spread the love

ಬೆಳಗಾವಿಯಲ್ಲಿ ಗಣಪತಿ ವಿಸರ್ಜನೆ ಮದ್ಯ ಬಂದ್ ಹಿನ್ನೆಲೆ: ಅಬಕಾರಿ ಅಧಿಕಾರಿಗಳಿಂದ ಅಕ್ರಮ ಗೋವಾ ಮದ್ಯ ವಶ…
ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಐವತ್ತು ಬಾಕ್ಸ್ ಮದ್ಯ, ಕಾರು, ಬೈಕ್ ಸಮೇತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ಜರುಗಿದೆ.
ಬೆಳಗಾವಿಯಲ್ಲಿ ಗಣಪತಿ ವಿಸರ್ಜನೆ ಮದ್ಯ ಬಂದ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಅಧಿಕಾರಿಗಳು ಬೆಳಗಾವಿ ತಾಲೂಕಿನ ರಾಕಸಕೊಪ್ಪ ಬಳಿ ಕಾರ್ಯಾಚರಣೆ ನಡೆಸಿ, ಬೆಳಗಾವಿ ನಗರಕ್ಕೆ ಅಕ್ರಮವಾಗಿ ಮದ್ಯ ತರುತ್ತಿದ್ದರು.
ಕಾರಿನಲ್ಲೇ ಐವತ್ತು ಬಾಕ್ಸ್ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್, ಅಬಕಾರಿ ಅಧಿಕಾರಿಗಳು ಕಾರು ತಡೆಯುತ್ತಿದ್ದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಾದರವಾಡಿಯ ಬಾಳು ಸಾತೇರಿ ಎಂಬಾತನನ್ನು ಬಂಧಿಸಿ ಆತನಿಂದ ಕಾರು, ಐವತ್ತು ಬಾಕ್ಸ್ ಮದ್ಯ, ಒಂದು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.
ಈ ಕುರಿತು ಬೆಳಗಾವಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ