Breaking News

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…
ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ವಿಜಯಪುರ ಎಸ್ಪಿ. ನಿಂಬರಗಿ
ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…
ಸಾಮಾಜೀಕ ಜಾಲತಾಣದ ಮೇಲೆ ತೀವ್ರ ನಿಗಾ
ಜಿಲ್ಲಾಡಳಿತದ ಸೂಚನೆ ಪಾಲಿಸಿ
ವಿಜಯಪುರ ಎಸ್ಪಿ. ಲಕ್ಷ್ಮಣ ನಿಂಬರಗಿ ಸೂಚನೆವಿಜಯಪುರದಲ್ಲಿ ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್ ಹಿನ್ನೆಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದರೇ, ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಸ್ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಸುಮಾರು 2751 ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಗಳು ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಶೇ. 50 ಕ್ಕಿಂತ 5ನೇ ದಿನ ಮತ್ತು ಶೇ. 30 ಕ್ಕೂ ಹೆಚ್ಚು ಗಣಪತಿಗಳು 7ನೇ ದಿನ ಮತ್ತು ಶೇ. 10 ರಷ್ಟು 9ನೇ ದಿನ ವಿಸರ್ಜನೆಯಾಗಲಿದೆ. ಕೇವಲ 2 ಗಣಪತಿಗಳು ಮಾತ್ರ 21ನೇ ದಿನಕ್ಕೆ ವಿಸರ್ಜನೆ ನಡೆಯಲಿವೆ.
ಈಗಾಗಲೇ 150ಕ್ಕೂ ಹೆಚ್ಚು ಕಡೆ ಪಿ ಎಸ್ ಐ ಮತ್ತು ಎಸ್ಪಿ ರ್ಯಾಂಕ್ ಅಧಿಕಾರಿಗಳೊಂದಿಗೆ ಎಲ್ಲ ಸಮುದಾಯದ ಜನರೊಂದಿಗೆ ಶಾಂತಿ ಸಭೆ ನಡೆಸಿದೆ. ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ನೀಡಿದೆ. ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳು ಪೂರ್ವ ತಯಾರಿಯನ್ನು ನಡೆಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣ, ವಿಡಿಯ್ಹೋಗಳನ್ನು ವೈರಲ್ ಮಾಡಿದರೇ ಕಠಿಣ ಕ್ರಮಕೈಗೊಳ್ಳಲಾಗುವುದು. ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್ ಹಿನ್ನೆಲೆ ದೇವಸ್ಥಾನ-ಪ್ರಾರ್ಥನಾ ಸ್ಥಳಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ