Breaking News

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಉಚ್ವಾಟಿಸಿದ ಬಳಿಕ ಯತ್ನಾಳ ಹೊಸ ಪಕ್ಷ ಸ್ಥಾಪನೆ ಕುರಿತು ಮಾತನಾಡುತ್ತಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ಯತ್ನಾಳರಿಗೆ ಬಿಜೆಪಿ ಗೇಟ್ ಪಾಸ್ ನೀಡಿತ್ತು. ಬಳಿಕ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸದೇ ಹೋದಲ್ಲಿ ವಿಜಯದಶಮಿಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಯವದಾಗಿ ಯತ್ನಾಳ ಹೇಳಿದ್ದರು. ಆದ್ರೆ ಒಂದು ಯತ್ನಾಳ ಬೆಂಬಲಿಗರು ಹಾಗೂ ಆಪ್ತರು ಹೊಸ ಪಕ್ಷದ ಪೊಟೊ ವೈರಲ್ ಮಾಡುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ…
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಯತ್ನಾಳರಿಗೆ ಬಿಜೆಪಿ ಪಕ್ಷವು ಉಚ್ಚಾಟನೆಯ ಶಿಕ್ಷೆ ವಿಧಿಸಿತು. ಉಚ್ಚಾಟನೆಯಿಂದ ವಿಚಲಿತರಾಗದ ಯತ್ನಾಳ ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತಷ್ಟು ವಾಗ್ದಾಳಿ ಮುಂದುವರೆಸಿದ್ದಾರೆ. ಬಿಜೆಪಿಗೆ ಮರಳಲು ಯತ್ನಾಳ ತುದಿಗಾಲ ಮೇಲೆ ನಿಂತಿದ್ದಾರೆ. ವಿಜಯೇಂದ್ರರನ್ನು ರಾಜಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ತಮ್ಮ ಟೀಮ್ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ.
ಒಂದು ವೇಳೆ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದೆ ಆದ್ದಲ್ಲಿ ಹೊಸ ಪಕ್ಷ ಸ್ಥಾಪನೆ ಖಚಿತ ಎಂದು ಎಚ್ಚರಿಕೆ ಯತ್ನಾಳ ನೀಡಿದ್ದರು. ವಿಜಯದಶಮಿಗೆ ಹೊಸ ಪಕ್ಷದ ಘೋಷಣೆ ಯಾಗುವ ಸಾಧ್ಯತೆ ಗಳಿದ್ದವು. ಆದ್ರೆ ಇದೀಗ ಗಣೇಶೋತ್ಸವ ಸಂದರ್ಭದಲ್ಲಿಯೇ ಯತ್ನಾಳರ ಹೊಸ ಪಕ್ಷವೆಂಬಂತೆ ಬಿಂಬಿತವಾಗುತ್ತಿರುವ ಹೊಸ ಪಕ್ಷದ ಪೊಟೊ ವೈರಲ್ ಆಗತೊಡಗಿದೆ. ಯತ್ನಾಳ ಬೆಂಬಲಿಗರು ಹಾಗೂ ಅತೀ ಆತ್ಮೀಯರೇ ಪೊಟೊ ವೈರಲ್ ಮಾಡುತ್ತಿರುವದು ಸಂಚಲನ ಮೂಡಿಸಿದೆ. ಆದ್ರೆ ಶಾಸಕ ಯತ್ನಾಳ ಮಾತ್ರ ಹೊಸ ಪಕ್ಷದ ಯಾವದೇ ಅಧಿಕೃತ ಮಾಹಿತಿಯನ್ನು ನೀಡದೇ ಇರೋದು ಕೂಡಾ ಕುತೂಹಲ ಕೆರಳಿಸಿದೆ.
.: ವಿಜಯಪುರ ನಗರದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಶುಭ ಕೋರುವ ಬ್ಯಾನರ್ ಗಳಲ್ಲಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ಹಾಕಿಕೊಂಡು ಯತ್ನಾಳರ ಅತ್ಯಾಪ್ತರೇ ಬ್ಯಾನರ್ ಹಾಕಿಸಿ ಪೊಟೊ ಪ್ರಚಾರ ಮಾಡುತ್ತಿದ್ದಾರೆ. BRP ಎಂಬ ಹೆಸರಿನ ಪಕ್ಷದ ಲಾಂಗ್ ಫಾರ್ಮ್‌ನ್ನು ಭಾರತ ರಾಷ್ಟ್ರಹಿತ ಪಾರ್ಟಿ ಎಂದಾಗಿದ್ದು,
ಇದು BRP ಶಾಸಕ ಯತ್ನಾಳರ ಶಾರ್ಟ್ ಕಟ್ ಹೆಸರು ಕೂಡಾ ಆಗಿದೆ. ಗೋಮಾತೆ ತನ್ನ ಕರುವಿಗೆ ಹಾಲು ಕುಡಿಸುವ ಚಿತ್ರ ಹಾಕಲಾಗಿದೆ. ಒಂದು ವೇಳೆ ಪಕ್ಷ ಘೋಷಣೆ ಯಾದಲ್ಲಿ ಸಂಪೂರ್ಣ ಹಿಂದುತ್ವದ ಪರವಾಗಿರುವ ಪಕ್ಷ ಎಂಬ ಸಂದೇಶ ಸಾರುವ ಕಾರ್ಯ ನಡೆಸಲಾಗುತ್ತಿದೆ. ಇನ್ನೂ ರಾಜಕೀಯ ವಿಶ್ಲೇಷಕರ ಪ್ರಕಾರ ಯತ್ನಾಳರು ತಮ್ಮ ಬೆಂಬಲಿಗರ ಮೂಲಕ ಹೊಸ ಪಕ್ಷದ ಕುರಿತು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿರಬಹುದು ಎನ್ನಲಾಗುತ್ತಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ