ಖಾನಾಪೂರ ತಾಲೂಕಿನಲ್ಲಿ ಮತದಾರರ ಹಕ್ಕು ಪಾದಯಾತ್ರೆ: ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್”ಅವರ ನೇತೃತ್ವದಲ್ಲಿ ದಿನಾಂಕ 17ರಂದು
ಆಂಕರ್:- ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪರವಾಗಿ, ಮತದಾರರ ಹಕ್ಕುಗಳ ಸಲುವಾಗಿ ಪಾದಯಾತ್ರೆಯನ್ನು ಇಂದು ಬಿಹಾರದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಾರಂಭಿಸಲಿದ್ದಾರೆ.
ಈ ಅಭಿಯಾನವನ್ನು ಎಐಸಿಸಿ ದೇಶಾದ್ಯಂತ ಜಾರಿಗೆ ತರಲಿದೆ. ಆಗಸ್ಟ್ 17 ರ ಭಾನುವಾರ, ಖಾನಾಪೂರ ಪಟ್ಟಣದ ಶಿವಸ್ಮಾರಕ್ ಚೌಕ್‌ನಿಂದ ನಂದಗಡದ ಸಂಗೊಳ್ಳಿ ರಾಯಣ್ಣನ ಸಮಾಧಿಸ್ಥಳದವರೆಗೆ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.
ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಪಾದಯಾತ್ರೆ ಆರಂಭವಾಗಲಿದ್ದು, ಒಂದೂವರೆ ಗಂಟೆಗಳ ಕಾಲ ಪಾದಯಾತ್ರೆಯ ನಂತರ ನಂದಗಡದಲ್ಲಿನ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ,
ದೇಶಾದ್ಯಂತ ಮತದಾರರ ಪಟ್ಟಿಗಳಲ್ಲಿನ ಭ್ರಷ್ಟಾಚಾರ ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತ ನಷ್ಟ ಅಥವಾ ಮತ ಕಳ್ಳತನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಪಾದಯಾತ್ರೆ ನಡೆಯಲಿದೆ.
ಆದ ಕಾರಣ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿಗಳಾದ
ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಖಾನಾಪೂರ ತಾಲೂಕಿನ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಯುವಕರು ಮತ್ತು ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
Laxmi News 24×7