ದೇಶ ಭದ್ರತೆಗೆ ನಿಂತ ಸೇನಾನಿಗಳು ಸದಾ ಪೂಜ್ಯನೀಯರು
ಅಂಕಲಗಿ ಮಠದ ಅಮರಸಿದ್ಧೇಶ್ವರ ಮಹಾಸ್ವಾಮೀಜಿ ಅಭಿಮತ
ಅಂಕಲಗಿ – ಜೀವದ ಹಂಗು ತೊರೆದು ಗಡಿ ಕಾಯ್ದು ನಮ್ಮನ್ನು ಹೂವಿನಂತೆ ರಕ್ಷಿಸುತ್ತಿರುವ ನಮ್ಮ ಸೇನಾನಿಗಳು ಸದಾ ಪೂಜ್ಯನೀಯರು ಎಂದು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಮಠಾಧ್ಯಕ್ಷರಾದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ರವಿವಾರ ಅಕ್ಕತಂಗೇರಹಾಳ ದಲ್ಲಿ ಜರುಗಿದ ಮಾಜಿ ಸೈನಿಕರ ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ , ಕುಂಡದ ಸಸಿಗೆ ನೀರುಣಿಸಿ, ಮಾಜಿ ಸೈನಿಕ ಸಂಘದ ನಾಮಫಲಕ ಅನಾವರಣ ಗೊಳಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಕ್ಕತಂಗೇರಹಾಳ ಗಟ್ಟಿ ನೆಲದಲ್ಲಿ ಮಾಜಿ ಸೈನಿಕ ಸಂಘ ಉದ್ಘಾಟಿಸುವ ಭಾಗ್ಯ ನನಗೆ ದೊರೆತಿದ್ದು ನನ್ನ ಸುದೈವ. ವಿಶ್ರಾಂತ ಸೈನಿಕರ ಕಲ್ಯಾಣ ಸರ್ಕಾರದ ಆದ್ಯ ಕರ್ತವ್ಯಆಗಿದೆಯಲ್ಲದೆ,
ಮಾಜಿ ಸೈನಿಕರ ಕುಟುಂಬಕ್ಕೆ ಸರ್ವ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕೆ ಜೆ ಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ ಮಾಜಿ ಸೈನಿಕ ಸಂಘದ ಕಚೇರಿ ರಿಬ್ಬನ್ನು ಕಟ್ ಮಾಡಿ ಉದ್ಘಾಟಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗುಲ್ಬರ್ಗಾ ಜೆಸ್ಕಾಮ ನ ವ್ಯಾವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗನ್ನವರ ಮಾತನಾಡಿ, ಸೈನಿಕರಿಗೆ ಸರ್ಕಾರ ಹತ್ತಾರು ಸೌಲಭ್ಯ ಕಲ್ಪಿಸಿದ್ದು,
ಅವುಗಳ ಸದ್ಬಳಕೆಗೆ ಮುಂದಾಗಬೇಕು . ಸಾಮಾಜಿಕ, ಸಾಂಸ್ಕ್ರತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಜಿ ಸೈನಿಕರ ಮಕ್ಕಳು ಗಣನೀಯ ಸಾಧನೆ ಗೈಯ್ಯುತ್ತಿರುವದು ಅತ್ಯಂತ ಸಂತಸದ ಸಂಗತಿ ಎಂದರು. ಬಸವರಾಜ ಮರಲಿಂಗನ್ನವರ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದರಲ್ಲದೆ, ಸರ್ವರನ್ನು ಸ್ವಾಗತಿಸಿ, ಸೈನಿಕ ಸಂಘದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಸೈನಿಕರಾದ
ಲಗಾಮನ್ನಾ ಮಾವನೂರಿ, ಸಿದ್ದಪ್ಪಾ ಬಸ್ಸಾಪೂರಿ, ಬಸವರಾಜ ಮುಳಕೂರಿ, ಶಂಕರ ಅಕ್ಕತಂಗೇರಹಾಳ, ಬಸವರಾಜ ಅಲ್ಲನ್ನವರ ಆಸೀನರಾಗಿದ್ದರು.
ಗ್ರಾಮದ ಮಾಜಿ ಸೈನಿಕರಾದ ಮುನೀರ ದೇಸಾಯಿ, ಮಲ್ಲಪ್ಪ ನಿಕಾಲಿ, ಬಸವರಾಜ ಹೊಳೆಯಾಚಿ, ಅಡಿವೆಪ್ಪಾ ಮುಳಕೂರಿ, ಬಾಲು ಕರಲಿಂಗನ್ನವರ, ಮಲಗೌಡಾ ಬಾವಿಹಾಳ, ಸೇರಿದಂತೆ ಪ್ರಮುಖರಾದ ಸಿದ್ದಪ್ಪ ಹೊಳೆಯಾಚಿ, ಓಂಪ್ರಕಾಶ್ ನಿರ್ವಾಣಿ, ಶಿವಪುತ್ರಪ್ಪಾ ಭಡಕಲ್, ಬಾಳಪ್ಪ ದಡ್ಡಿ ಅಣ್ಣಪ್ಪಾ ಸುಳಧಾಳ ಮುಂತಾದವರಿದ್ದರು. ಲಗಾಮನ್ನಾ ಮಾವನೂರಿ ಪ್ರಾಸ್ತಾವಿಕ ಮಾತನಾಡಿದರು. ಶಿವನಗೌಡಾ ನಿರ್ವಾಣಿ ವಂದಿಸಿದರು.
ವರದಿ, ಸುರೇಶ ಉರಬಿನಟ್ಟಿ
Laxmi News 24×7