Breaking News

ಮಹಾರಾಷ್ಟ್ರ ಚುನಾವಣೆಯಲ್ಲಿ ‘ಗೆಲುವಿನ ಗ್ಯಾರಂಟಿ’ ನೀಡಿದ್ದ ಅನಾಮಿಕರು: ಶರದ್​ ಪವಾರ್

Spread the love

ನಾಗ್ಪುರ (ಮಹಾರಾಷ್ಟ್ರ) : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತಗಳ್ಳತನ ಆರೋಪ ಮಾಡುತ್ತಿರುವ ನಡುವೆ, I.N.D.I.A ಕೂಟದ ಭಾಗವಾದ ನ್ಯಾಷನಲ್​ ಕಾಂಗ್ರೆಸ್​ ಪಕ್ಷದ (ಎಸ್​ಪಿ) ಮುಖ್ಯಸ್ಥ ಶರದ್​ ಪವಾರ್​ ಅವರು ಮತ್ತೊಂದು ಅಚ್ಚರಿಯ ಅಂಶವನ್ನು ಬಹಿರಂಗಪಡಿಸಿದ್ದಾರೆ.

2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ, 288 ಕ್ಷೇತ್ರಗಳ ಪೈಕಿ 160 ಸ್ಥಾನ ಗೆಲ್ಲಿಸಿಕೊಡುವುದಾಗಿ ‘ಗ್ಯಾರಂಟಿ’ ನೀಡಿದ್ದರು ಎಂದು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ನಾಗ್ಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್​ ಗಾಂಧಿ ಆರೋಪಿಸುತ್ತಿದ್ದಾರೆ. ಇದಕ್ಕೆ ಜೋಡಣೆಯಾಗಿ ಒಂದು ಘಟನೆ ನಡೆಯಿತು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಆಗಮಿಸಿ, ಚುನಾವಣೆ ಗೆಲ್ಲಿಸಿಕೊಡುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.

ಗೆಲುವಿನ ಗ್ಯಾರಂಟಿ ನೀಡಿದ್ದ ಅನಾಮಿಕರು: ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ 160 ಸ್ಥಾನಗಳಲ್ಲಿ ವಿಪಕ್ಷಗಳ ಕೂಟವಾದ ಮಹಾ ವಿಕಾಸ್​ ಅಘಾಡಿ (ಎಂವಿಎ) ಗೆಲುವು ಸಾಧಿಸುವಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ನಾವು ನೆರವು ನೀಡುವುದಾಗಿ ತಿಳಿಸಿದ್ದರು ಎಂದು ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ.

ಇದನ್ನು ಕೇಳಿದ ಬಳಿಕ ಅಚ್ಚರಿಗೆ ಒಳಗಾಗಿ, ನಾನು ಅವರನ್ನು ರಾಹುಲ್​ ಗಾಂಧಿ ಅವರ ಬಳಿಗೆ ಕರೆದೊಯ್ದೆ. ಇಬ್ಬರು ಅನಾಮಿಕರ ಮಾತನ್ನು ವಿಪಕ್ಷ ನಾಯಕ ನಿರ್ಲಕ್ಷಿಸಿದರು. ಈ ರೀತಿಯ ವಿಷಯಗಳಲ್ಲಿ ನಾವು ಭಾಗಿಯಾಗುವುದಿಲ್ಲ. ಚುನಾವಣೆ ಮೂಲಕ ಜನರ ಬಳಿಗೆ ತೆರಳಿ ಜನಾದೇಶ ಪಡೆಯುತ್ತೇವೆ ಎಂದು ಅವರ ನೀಡಿದ್ದ ಗ್ಯಾರಂಟಿಯನ್ನು ನಿರಾಕರಿಸಿದರು ಎಂದು ಶರದ್​ ಪವಾರ್​ ತಿಳಿಸಿದ್ದಾರೆ.

ಆ ಇಬ್ಬರು ವ್ಯಕ್ತಿಗಳು ಯಾರು?: ಕೇಂದ್ರದ ಮಾಜಿ ಸಚಿವರೂ ಆಗಿರುವ ಎನ್​​ಸಿಪಿ ಮುಖ್ಯಸ್ಥರು ಪ್ರಸ್ತಾಪಿಸಿದ ಆ ಇಬ್ಬರು ಅನಾಮಿಕ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಅಂದು ಅವರು ನೀಡಿದ ಭರವಸೆ ಟೊಳ್ಳು ಎಂದು ತಿಳಿದು ಅವರ ಹೆಸರು ಮತ್ತು ಸಂಪರ್ಕ ವಿವರಗಳನ್ನು ಪಡೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್

Spread the loveದೆಹಲಿ: ಪರಿಶಿಷ್ಟ ಜಾತಿ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್‌  ಇಂದು (ಮಂಗಳವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಹಿಂದೂ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ