ಹುಕ್ಕೇರಿ : ಹುಕ್ಕೇರಿ ಉಪ ನೊಂದಣಿ ಕಛೇರಿಗೆ ಲೋಕಾಯುಕ್ತರ ಭೇಟಿ
ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪ ಆಯುಕ್ತ ಬಿ ಎಸ್ ಪಾಟೀಲರು ಜಿಲ್ಲೆಯಲ್ಲಿ ಪ್ರವಾಸದಲ್ಲಿರುವಾಗಲೆ ಹುಕ್ಕೇರಿ ಉಪ ನೋಂದಣಿ ಕಛೇರಿಗೆ ನ್ಯಾಯಾದೀಶ ರಾಮನಾಥ ಚವ್ಹಾನ ನೇತೃತ್ವದ ಲೋಕಾಯುಕ್ತ ತಂಡ ದಿಢೀರನೆ ಹುಕ್ಕೇರಿ ಸಬ್ ರಿಜಿಸ್ಟ್ರಾರ್ ಕಛೇರಿಗೆ ಭೇಟಿ ನೀಡಿ ದಸ್ತಾವೇಜುಗಳನ್ನು ಪರಿಸಿಲಿಸಿದರು,
ನಂತರ ಖೋಟ್ಟಿ ಆಧಾರ ಕಾರ್ಡ ಸೃಷ್ಟಿಸಿ ಸರ್ವೆ ನಂಬರ 183 / ಬ ಕ್ಷೇತ್ರದ 1 ಎಕರೆ 13 ಗುಂಟೆ 8 ಆಣೆ ಜಮಿನನ್ನು ಮಾರಾಟ ಮಾಡಿದ ಬಗ್ಗೆ ದೂರು ಇದ್ದ ಹಿನ್ನಲೆಯಲ್ಲಿ ನೊಂದಣಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ತಮ್ಮಣ್ಣಾ ನಮ್ಮ ಜಮಿನನ್ನು ನಮಗೆ ಗೋತ್ತಿಲ್ಲದೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ, ಇತ್ತಿಚಿಗೆ ನಾವು ಪಹಣಿ ಪತ್ರ ದಲ್ಲಿ ನಮ್ಮ ಹೆಸರು ಇಲ್ಲದ್ದನ್ನು ಕಂಡು ದೂರು ನೀಡಲಾಗಿದೆ ಎಂದರು ಲೋಕಾಯುಕ್ತ ಅಧಿಕಾರಿಗಳು ಉಪ ನೊಂದಣಿ ಅಧಿಕಾರಿ ಮಹೇಶ ಬಾಣಿಮಠ ರವರಿಂದ ಮಾಹಿತಿ ಪಡೆದು ಮುಂದಿನ ಕ್ರಮಕ್ಕಾಗಿ ಕ್ರಮ ವಹಿಸಲಾಗುತ್ತಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನ್ಯಾಯಾಧೀಶ ರಾಮನಾಥ ಚವ್ಹಾನ, ಬಾಗಲಕೋಟ ಲೋಕಾಯುಕ್ತ ಇನ್ಸಪೇಕ್ಟರ ಬಿ ಎ ಬಿರಾದಾರ, ಬೆಂಗಳೂರು ಲೋಕಾಯುಕ್ತ ಇನ್ಸಪೇಕ್ಟರ ಅಮರೇಶ ಜೇಗರಕರ, ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಮತ್ತು ಹುಕ್ಕೇರಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಈ ರೀತಿಯ ಪ್ರಕರಣಗಳು ಹೇಚ್ಚಾಗುತ್ತಿದ್ದು ಇದರ ಹಿಂದೆ ಓರ್ವ ಮಹಿಳೆಯನ್ನೋಳಗೊಂಡ ತಂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಇದಕ್ಕೆ
ಅಧಿಕಾರಿಗಳ ಸಹಾಯ ಹಸ್ತ ಮತ್ತು ಶಾಮಿಲೂ ಕಂಡು ಬರುತ್ತಿದೆ ಎನ್ನಲಾಗುತ್ತಿದೆ
Laxmi News 24×7