ಧಾರವಾಡ ಶಹರ ಪೊಲೀಸ್ ಠಾಣೆ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ… ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರಿಂದ ಮನೆ ಮನೆಗೆ ಪೊಲೀಸ್ ಉದ್ದೇಶ ಮನವರಿಕೆ..
ಶಾಂತಿ ಸಮಾಜ ಹಾಗೂ ಕಾನೂನು ಸುವ್ಯವಸ್ಥೆ ಸೇರಿ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನ ಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಇತ್ತೀಚೆಗೆ ಜಾರಿಯಾಗಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಧಾರವಾಡ ಶಹರ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾಯಿತು.
ಹೌದು ಧಾರವಾಡ ಶಹರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಠಾಣೆಯ ಆವರಣದ ಸಭಾ ಭವನದಲ್ಲಿ ನಗರದ ಚರಂತಿಮಠ, ಹೊಸಾಯಲ್ಲಾಪುರ ಸಾರ್ವಜನಿಕರುನ್ನು ಸಭೆಗೆ ಅಹ್ವಾನಿಸಿ ಕಾರ್ಯಕ್ರಮ ಜರುಗಿಸಲಾಗಿದೆ. ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರವರು ಮನೆ ಮನೆಗೆ ಪೊಲೀಸ್ ಉದ್ದೇಶಗಳನ್ನು ಸಭೆಯಲ್ಲಿದ್ದ ಜನರಿಗೆ ತಿಳಿಸಿಕೊಟ್ಟರು. ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಇದೆ, ಸಮಾಜಘಾತುಕ ಶಕ್ತಿಗಳನ್ನು ಮಟ್ಟಾ ಹಾಕುವ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಾರೆ.
ತಮ್ಮ ಗಮನಕ್ಕೆ ಕಾನೂನು ಉಲ್ಲಂಘನೆ ಸೇರಿ ಅಕ್ರಮ ಚಟುವಟಿಕೆ ಸೇರಿ ಕಾನೂನು ಬಾಹಿರ ಕೆಲಸಗಳು ನಡೆಯಿತ್ತಿದ್ದರೆ ಸಮೀಪದ ಪೊಲೀಸ್ ಠಾಣೆ ಅಥವಾ 112 ಸಹಾಯವಾಣಿಗೆ ಕರೆ ಮಾಡಿ. ಪೊಲೀಸರು ಜನ ಸ್ನೇಹಿಯಾಗಿರಬೇಕು ಎನ್ನುವ ಉದ್ದೇಶದಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದ್ದಲ್ಲಿ, ಸ್ವಚ್ಚ ಹಾಗೂ ಶಾಂತಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರಿಗೂ ಇಲ್ಲಿ ಜವಾಬ್ದಾರಿ ಇದೆ, ನಾವು ಸಮಾಜದಲ್ಲಿ ಇದ್ದೇವೆ ಅಂದರೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ತುಂಬಾ ಮುಖ್ಯ ಎಂದು ಹೇಳುವ ಮೂಲಕ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ದೇಶಗಳನ್ನು ಜನರ ಮುಂದೆ ತೆರೆದಿಟ್ಟರು.
Laxmi News 24×7