Breaking News

ಒಂಟಿ ವೃದ್ದೆಯನ್ನ ಯುವಕರ ಗ್ಯಾಂಗ್​​ವೊಂದು ಕೊಲೆಗೈದು ಚಿನ್ನಾಭರಣ ದೋಚಿ ಎಸ್ಕೇಪ್

Spread the love

ಕಲಬುರಗಿ : ಒಂಟಿ ವೃದ್ದೆಯನ್ನ ಯುವಕರ ಗ್ಯಾಂಗ್​​ವೊಂದು ಕೊಲೆಗೈದು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ ಪ್ರಕರಣವನ್ನು ಪೊಲೀಸ್ ಪಡೆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಭೇದಿಸಿ ಹಂತಕರನ್ನು ಜೈಲಿಗಟ್ಟಿದೆ. ವೃದ್ದೆ ಮರ್ಡರ್ ಹಾಗೂ ಅರೆಸ್ಟ್‌ನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ತಾನಾಜಿ (25) ವಿಜಯಕುಮಾರ್ (23) ಲಕ್ಷ್ಮಣ (24) ಹಾಗೂ ಸಂಜೀವಕುಮಾರ್ (24) ಇವರೇ 78 ವರ್ಷದ ಜಗದೇವಿ ಎಂಬ ವೃದ್ದೆಯನ್ನ ಕತ್ತು ಹಿಸುಕಿ ಕೊಲೆ ಮಾಡಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಹಂತಕರು.

ಪ್ರಕರಣದ ಸಂಪೂರ್ಣ ವಿವರ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ: ಈ ಕುರಿತು ಎಸ್​​ಪಿ ಆಡೂರು ಶ್ರೀನಿವಾಸಲು ಅವರು ಮಾತನಾಡಿದ್ದು, ಜುಲೈ 10 ರಂದು ಕಲಬುರಗಿಯ ಚಿತ್ತಾಪುರ ತಾಲೂಕಿನ ಪೇಠಶಿರೂರ್ ಗ್ರಾಮದಲ್ಲಿ ಕೊಲೆ ನಡೆದಿತ್ತು. ಕುಟುಂಬಸ್ಥರು ಯಾರೂ ಇಲ್ಲದ ಕಾರಣ ವೃದ್ಧೆ ಜಗದೇವಿ ಒಂಟಿಯಾಗಿ ವಾಸಿಸುತ್ತಿದ್ದರು.‌ ಅಜ್ಜಿ ಜಗದೇವಿಯ ಬಳಿ ನಗದು ಹಾಗೂ ಚಿನ್ನಾಭರಣ ಇರುವ ಮಾಹಿತಿ ತಿಳಿದು, ಅದೇ ಗ್ರಾಮದ ನಾಲ್ವರು ಯುವಕರು ಆಕೆಯನ್ನು ಕೊಂದು ಎಲ್ಲವನ್ನು ದೋಚಲು ಎರಡು ಬಾರಿ ಪ್ಲ್ಯಾನ್ ಹಾಕಿ ವಿಫಲರಾಗಿದ್ದರು. ಆದರೆ ಮೂರನೇ ಬಾರಿ ಪ್ಲ್ಯಾನ್ ಮಾಡಿಕೊಂಡು ವೃದ್ದೆಯ ಮನೆಗೆ ಹಿಂಬಾಗಿಲಿನಿಂದ ನುಗ್ಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಇದು ನ್ಯಾಚುರಲ್ ಡೆತ್ ಆಗಿ ತೋರಿಸಲು ಮಂಚದ ಮೇಲೆ ಮಲಗಿಸಿ ಬೆಲೆ ಬಾಳುವ ವಸ್ತುಗಳನ್ನು ಕದ್ದು ಮನೆಯ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿದ್ದರು. ಆದರೆ ತಾಂತ್ರಿಕ ತನಿಖೆ ಹಂತಕರ ಸುಳಿವು ಕೊಟ್ಟಿತ್ತು. ಇದೇ ಆಧಾರದಲ್ಲಿ ನಾಲ್ವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ