ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ
ಕಾರ್ಗಿಲ್ ವಿಜಯದ 26ನೇ ವರ್ಷಾಚರಣೆಯ ಅಂಗವಾಗಿ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಗಿಲ್ ವಿಜಯದಿವಸ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಂಡು ಮಾತನಾಡಿದರು.

“ನಾವೆಲ್ಲರೂ ಪಟ್ಟಣಗಳಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರೆ ಗಡಿಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರೇ ಕಾರಣ. ನಮ್ಮ ದೇಶದ ಭದ್ರತೆಗೆ ಶ್ರಮಿಸುತ್ತಿರುವ ಅವರೇ ನಮ್ಮ ನಿಜವಾದ ದೇವರುಗಳು. ನಮ್ಮೆಲ್ಲ ಸೈನಿಕರ ಕರ್ತವ್ಯ ನಿಷ್ಠೆ, ದೇಶಭಕ್ತಿ, ಪ್ರಾಮಾಣಿಕತೆಗೆ ನಮನಗಳು ಎಂದರು.
ಕಾರ್ಗಿಲ್ ವಿಜಯಕ್ಕೆ ಶ್ರಮಿಸಿದ ವೀರಯೋಧರು, ಹಾಗೂ ಇನ್ನಿತರೆ ಯುದ್ಧಗಳಲ್ಲಿ ದೇಶದ ರಕ್ಷಣೆಗಾಗಿ ಶ್ರಮಿಸಿದ ಸೈನಿಕರ, ತ್ಯಾಗ ಬಲಿದಾನ್ನು ಸ್ಮರಿಸಿದೆ. ಅಂತೆಯೇ ದೇಶದ ವಿಮಾನಯಾನ ಹಾಗೂ ರಕ್ಷಣಾ ವಲಯಕ್ಕೆ ಕರ್ನಾಟಕದ ಕೊಡುಗೆಗಳನ್ನು ಪ್ರಸ್ತಾಪಿಸಿದೆ. ನಿವೃತ್ತ ಸೈನಿಕರ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದೆರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಕರ್ನಲ್ ಜಿ. ಬಿ. ಶಿಂಧೆ, ನಿವೃತ್ತ ಕರ್ನಲ್ ಫಿರೋಜ್ ಕಾರ್ಲೇಕರ, ಸೇರಿದಂತೆ ನಿವೃತ್ತ ಸೈನಿಕರು, ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ, ಜಿಲ್ಲಾ SP ಲಕ್ಷ್ಮಣ ನಿಂಬರಗಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಬಸವರಾಜ ಕೌಲಗಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.
Laxmi News 24×7