Breaking News

ಯರಹಳ್ಳಿಯಲ್ಲಿ 44ನೇ ಶ್ರೀ ಚಾಮುಂಡೇಶ್ವರಿ ಹಬ್ಬ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ ಸಾವಿರಾರು ಭಕ್ತರು

Spread the love

ಯರಹಳ್ಳಿಯಲ್ಲಿ 44ನೇ ಶ್ರೀ ಚಾಮುಂಡೇಶ್ವರಿ ಹಬ್ಬ
ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ ಸಾವಿರಾರು ಭಕ್ತರು
ಎಚ್.ಡಿ. ಕೋಟೆ ತಾಲ್ಲೂಕಿನ ಯರಹಳ್ಳಿ ಗ್ರಾಮದಲ್ಲಿ 44ನೇ ವರ್ಷದ ಶ್ರೀ ಚಾಮುಂಡೇಶ್ವರಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಗ್ರಾಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಂಸ್ಕೃತಿಕ ಕಲೆಗಳಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ವಿದ್ಯಾರ್ಥಿಗಳಿಂದ ಕಲಾತಂಡಗಳು ವಾದ್ಯ, ಕಂಸಾಳೆ, ಚಿಲಿಪಿಲಿ ಗೊಂಬೆ, ಕರಗ, ಬೆಳ್ಳಿರಥದೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಿ ದೇವಿಗೆ ನಮನ ಸಲ್ಲಿಸಿದರು. ಹಬ್ಬದ ವೈಭವಕ್ಕೆ ಗ್ರಾಮಸ್ಥರಿಂದ ಅಪಾರ ಸಹಕಾರ ದೊರಕಿತು.ಈ ಆಚರಣೆಗೆ ಶಾಸಕರಾದ ಅನಿಲ್ ಚಿಕ್ಕಮಾದು,
ಮೈಸೂರಿನ ಅನಗ ಆಸ್ಪತ್ರೆಯ ಡಾ. ಮಹೇಶ್, ಪುರಸಭೆ ಸದಸ್ಯರು ಪ್ರೇಮ್ ಮತ್ತು ನರಸಿಂಹಮೂರ್ತಿ, ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್, BJP ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ರಾವ್ ಭೋರತ್, ರೈತ ಮೋರ್ಚಾ ಕಾರ್ಯದರ್ಶಿ ನವೀನ್ ಗೌಡ, ಹಾಗೂ ನಾಮ ನಿರ್ದೇಶಕರು ಪ್ರಕಾಶ್, ಗಣೇಶ್, ರಮೇಶ್, ದೇವರಾಜ್ ರಾವ್, ಮಾದೇವ್ ರಾವ್ ಸೇರಿದಂತೆ ಮರಾಠಾ ಗೊಂದಳಿ ಸಮಾಜದ ಮುಖ್ಯಸ್ಥರು ಭಾಗವಹಿಸಿದ್ದರು.
ಈ ಹಬ್ಬವು ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವುದರ ಜೊತೆಗೆ ಗ್ರಾಮಸ್ಥರ ಸಹಭಾಗಿತ್ವದಿಂದ ಸಾಂಸ್ಕೃತಿಕ ಏಕತೆಗೂ ಸಾಕ್ಷಿಯಾಯಿತು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ