ವಿಜಯಪುರ, ಜುಲೈ 21: ಕೂಡಲಸಂಗದ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಯಾವದೇ ಪಕ್ಷಕ್ಕಾಗಿ ಹೋರಾಡುತ್ತಿಲ್ಲ, ಪಂಚಮಸಾಲಿ ಸಮಾಜದ ಒಳಿತಿಗಾಗಿ ಮಾತ್ರ ಅವರು ಹೋರಾಡುತ್ತಿದ್ದಾರೆ,
ಅವರ ಕುರಿತು ಹಗುರವಾಗಿ ಮಾತಾಡುವ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅಂತ್ಯಕಾಲ ಬಂದಿದೆ, ದೀಪ ಆರುವ ಮುನ್ನ ಭಗ್ಗನೆ ಉರಿಯುವ ಹಾಗೆ ಅವನ ಅಂತ್ಯವೂ ಸಮೀಪಿಸಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಾಧ್ಯಮಗಳು ಟಿಆರ್ಪಿಗೋಸ್ಕರ ಅಯೋಗ್ಯನನ್ನು ವೈಭವೀಕರಿಸುತ್ತಿವೆ, ತೈಲವರ್ಣದ ವಿಭೂತಿ ಹಣೆಗೆ ಬಳಿದುಕೊಳ್ಳುವ ಅವನೆಂಥ ಲಿಂಗಾಯತ? ತಾನೂ ಸಹ ತನ್ನದೇ ಗೋಶಾಲೆಯಲ್ಲಿ ತಯಾರಾಗುವ ವಿಭೂತಿಯನ್ನು ಹಚ್ಚಿಕೊಳ್ಳುತ್ತೇನೆ, ವಿಭೂತಿ ಹಚ್ಚಿದ್ದು ಯಾರಿಗೂ ಕಾಣಬಾರದು ಎಂದು ಯತ್ನಾಳ್ ಹೇಳಿದರು.
Laxmi News 24×7