ಹುಕ್ಕೇರಿ : ಹಿಡಕಲ್ ಡ್ಯಾಂ ಜಾಕ್ ವೇಲ್ ಕಾಮಗಾರಿ ಸ್ಥಗಿತಗೋಳಿಸಿದ ರೈತರು
ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡಾ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಯ ಅಂಗವಾಗಿ ಇಂದು ಜಲಾಶಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಜಾಕ್ ವೇಲ್ ಕೇಲಸ ಪ್ರಾರಂಬವಾಗಿದ್ದನ್ನು ಗಮನಿಸಿದ ಹುಕ್ಕೇರಿ ತಾಲೂಕಿನ ವಿವಿಧ ರೈತ ಸಂಘಟನೆಗಳು ಮತ್ತು ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಅದ್ಯಕ್ಷ ದುಂಡನಗೌಡಾ ಪಾಟೀಲ ಹಾಗೂ ಮಾಜಿ ಸಚಿವ ಶಶಿಕಾಂತ ನಾಯಿಕ, ನ್ಯಾಯವಾದಿ ರಾಮಚಂದ್ರ ಜೋಶಿ, ಬಸವ ಪ್ರಭು ವಂಟಮೂರಿ,
ಗೋಪಾಲ ಮರಬಸನವರ, ಇಳಗೇರಿ, ಕುಮಾರ ಬಡಕುಂದ್ರಿ, ಲಕ್ಷ್ಮಿ ಜೋಡಟ್ಟಿ ಮತ್ತು ಸುಭಾಷ ನಾಯಿಕ ನೇತೃತ್ವದಲ್ಲಿ ನೂರಾರು ರೈತರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕೇಲಸ ಬಂದಮಾಡಿ ಅಗೆದ ಗುಂಡಿಗಳನ್ನು ಮುಚ್ಚಿ ನೀರಾವರಿ ಅಧಿಕಾರಿಗಳಿಗೆ ಮತ್ತು ಸರ್ಕಾರದ ವಿರುದ್ಧ ಘೋಷನೆ ಕೂಗಿ ನಮ್ಮ ನೀರು ನಮ್ಮ ಹಕ್ಕು ಯಾವದೇ ಕಾರಣಕ್ಕೂ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಬಿಡುವದಿಲ್ಲಾ ಎಂದು ಮುಖ್ಯ ನೀರಾವರಿ ಅಭಿಯಂತರ ಅರವಿಂದ ರವರನ್ನು ತರಾಟೆಗೆ ತಗೆದುಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ,ಕೂಲಿ ಕಾರ್ಮಿಕರ ಸಂಘಟನೆ, ಸಂಯುಕ್ತ ಕರ್ನಾಟಕದ ಭಾರತೀಯ ಕೃಷಿಕ ಸಮಾಜ, ರೈತ ಹಿತ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಕಾಮಗಾರಿಯನ್ನು ಬಂದ್ ಮಾಡಿ ಮತ್ತೆ ಈ ಭಾಗದಲ್ಲಿ ಯೋಜನೆಯ ಕಾಮಗಾರಿ ಪ್ರಾರಂಭಿಸಿದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಅಭಿಯಂತರ ಅರವಿಂದ ಮಾತನಾಡಿ ಹಿಡಕಲ್ ಜಲಾಶಯದ ವ್ಯಾಪ್ತಿಯಲ್ಲಿ ರೈತರು ಹಮ್ಮಿಕೊಂಡ ಪ್ರತಿಭಟನೆಯ ವಿವರವನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವದು ಎಂದು ಹೇಳಿದರು.
Laxmi News 24×7