Breaking News

ಉತ್ತರ ಭಾರತೀಯ ವ್ಯಾಪಾರಸ್ಥ ರಿಂದ ಕನ್ನಡಿಗರಿಗೆ ಮಹಾ ಮೋಸ; ವಿಜಯಪುರ ದಲ್ಲಿ ವ್ಯಾಪಾರಿಯ ಕರಾಮತ್ತು ಸೆಲ್ಪಿ ವಿಡಿಯೋದಿಂದ ಬಹಿರಂಗ

Spread the love

ಉತ್ತರ ಭಾರತೀಯ ವ್ಯಾಪಾರಸ್ಥ ರಿಂದ ಕನ್ನಡಿಗರಿಗೆ ಮಹಾ ಮೋಸ; ವಿಜಯಪುರ ದಲ್ಲಿ ವ್ಯಾಪಾರಿಯ ಕರಾಮತ್ತು ಸೆಲ್ಪಿ ವಿಡಿಯೋದಿಂದ ಬಹಿರಂಗ
May be an image of text that says "たなさいん Eg ಕಿರಾಣ ಜಸ್ ಶ್ರೀ ကိုဘးာ ಸುಂಧಾಮಾತ ಪೋಕ್ಸಿಂತ್ಸ ಸ್ವರೇಅವರಿ & ಗೋಧಿ, ಜೋತಿ ಗುತ್ತವೆ. ನುಕ್‌ಸ್ಟಾಲ್ WP PIFIN OKBRAND อยศลงร์"
ಉತ್ತರ ಭಾರತದ ವ್ಯಾಪಾರಿಗಳು ಸ್ಥಳೀಯ ಕನ್ನಡಿಗರಿಗೆ ಊಹಿಸಲಾಗದ ಮೋಸ ಮಾಡ್ತಿದ್ದಾರಾ? ರಾಜಸ್ತಾನಿ ಮೂಲದ ವ್ಯಾಪಾರಿಯಿಂದ ಸ್ಥಳೀಯ ವ್ಯಾಪಾರಿಗಳಿಗೆ ಮೋಸ ಮಾಡುತ್ತಿದ್ದಾರಾ. ಹೋಲ್ ಸೇಲ್ ದರದಲ್ಲಿ ಮೂಟೆ ಗಟ್ಟಲೆ ಸಕ್ಕರೆ, ಅಕ್ಕಿ, ಬೇಳೆ, ರವೆ, ಕಡಲೆ ಹಿಟ್ಟು ವ್ಯಾಪಾರ ಮಾಡುವ ರಾಜಸ್ತಾನ್ ಮೂಲದ ವ್ಯಾಪಾರಿಯೊರ್ವ ಫ್ಯಾಕ್ಟರಿಯಿಂದ ಬರುವ ಚೀಲಗಳಿಂದ ದಿನಸಿ ಕದ್ದು ಮೊಸ ಮಾಡುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ…
May be an image of motorcycle, scooter and text
ಫ್ಯಾಕ್ಟರಿ ಯಿಂದ ಬರುವ ದಿನಸಿ ಕದ್ದು ಅದನ್ನು ರೀ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಚಾಲಾಕಿ ಬುದ್ದಿಯ ಸೆಲ್ಪಿ ವಿಡಿಯೋ ಹೊರಗೆ ಬಂದಿದೆ. ಇನ್ನೂ ಈ ಆಸಾಮಿ ದಿನಸಿ ಕದ್ದು, ಪುನಃ ಪ್ಯಾಕ್ ಮಾಡೋದಕ್ಕೆ ಗೋಡವನ್‌ಗಳಲ್ಲಿ ಮಶೀನ್ ಇಟ್ಟುಕೊಂಡಿದ್ದಾನೆ. ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜಿಗಜಿವಣಿ ಗ್ರಾಮದಲ್ಲಿರೋ ಹೋಲ್‌ಸೇಲ್ ದಿನಸಿ ವ್ಯಾಪಾರಿಯಿಂದ ನಿರಂತರ ಮೋಸ ನಡೆದಿದೆ. ಜಿಗಜಿವಣಿ ಗ್ರಾಮದಲ್ಲಿರೋ ಸುಂಧಾಮಾತಾ ಹೋಲಸೇಲ್ ದಿನಸಿ ಅಂಗಡಿಯು ರಾಜಸ್ತಾನ ಮೂಲದ ಗೌತಮ್, ಕಿಶನ್ ಎಂಬುವವರು ನಡೆಸುವ ಹೋಲ್‌ಸೇಲ್ ಅಂಗಡಿಯಾಗಿದೆ. ಇವರು ಪ್ಯಾಕ್ಟರಿಗಳಿಂದ ಬರುವ ಪ್ರತಿ 25 ಕೆ.ಜಿ ಚೀಲಗಳಿಂದ 4 ಕೆ.ಜಿ, 5 ಕೆ.ಜಿ ಯಷ್ಟು ದಿನಸಿ ಕಳ್ಳತನ ಮಾಡುತ್ತಾರೆ. ಇನ್ನೂ ಮಾಲೀಕ ಕಿಶನ್ ದಿನಸಿ‌ ಕದ್ದು ತಾನೇ ಸ್ವತಃ ವಿಡಿಯೋ ಮಾಡಿಕೊಂಡಿದ್ದಾನೆ. ರಾಜಸ್ತಾನ ವ್ಯಾಪಾರಿಯಾಗಿರುವ ಪಾರಿ ಕಿಶನ್ ಬಳಿಕ ಹೀಗೆ ಮಾಲು ಕದ್ದ ಚೀಲಗಳನ್ನ ಬಲ್ಕ್ ರೂಪದಲ್ಲಿ ಹೊಲಸೇಲ್‌ನಲ್ಲಿ ಮಾರಾಟ ಮಾಡುತ್ತಿದ್ದಾನೆ.
May be an image of 2 people and text
ಹೀಗೆ ಕಳ್ಳತನ ಮಾಡೊದ್ರಿಂದ 50-100 ಪ್ಯಾಕೇಟ್ ಖರೀದಿಸುವ ವ್ಯಾಪಾರಿಗಳನ್ನ ಯಾಮಾರಿಸುತ್ತಿದ್ದರು. ಫ್ಯಾಕ್ಟರಿಯಲ್ಲಿ ಪ್ಯಾಕ್ ಆಗಿ ಬರುವ ದಿನಸಿ ಚೀಲಗಳಿಂದ ಕಳ್ಳತನ ಮಾಡಲೆಂದೆ ಮಶೀನ್‌ಗಳನ್ನ ಇಟ್ಟುಕೊಂಡಿದ್ದಾರೆ‌. ಜಿಲ್ಲೆಯ ಚಡಚಣ, ನಿಂಬರಗಿ, ಜಿಗಜಿವಣಿ, ಕಾತ್ರಾಳ, ಹಡಲಸಂಗ ಸೇರಿದಂತೆ ಹಲವು ಗ್ರಾಮಗಳ ಸಣ್ಣ ಪುಟ್ಟ ಕಿರಾಣಾ ಅಂಗಡಿಗಳಿಗೆ ದಿನಸಿ ನೀಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಇದೇ ರೀತಿ ನಡೆಯುತ್ತಿದೆ ಎನ್ನವ ಗಂಭೀರ ಆರೋಪವು ಕೇಳಿ ಬಂದಿದೆ. ಈಗ ಜಿಲ್ಲಾ ತೂಕ ಮತ್ತು ಮಾಫನ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ರಾಜಸ್ತಾನಿ ವ್ಯಾಪಾರಿ ವಿರುಧ್ಧ ಕರ್ನಾಟಕ ರಾಷ್ಟ್ರ ಸಮಿತಿಯಿಂದ ದೂರು ಸಲ್ಲಿಸಲಾಗಿದೆ.May be an image of 2 people and text
ಒಟ್ನಲ್ಲಿ ತನ್ನ ಸೆಲ್ಪಿ ವಿಡಿಯೋ ದಿಂದಲೇ ತನ್ನ ಅಕ್ರಮವನ್ನೆ ಬಯಲು ಮಾಡಿಕೊಂಡ ವ್ಯಾಪಾರಿಗಳು ಇವರಾಗಿದ್ದಾರೆ. ದೂರು ಸಲ್ಲಿಕೆಯಾಗಿದ್ದು ಅಧಿಕಾರಿಗಳು ಅದ್ಯಾವ ಕ್ರಮ ಜರುಗಿಸುತ್ತಾರೋ ಎಂದು ಕಾದು ನೋಡಬೇಕಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ