ದೇಶದ ಪ್ರತಿಷ್ಠಿತ ಖರಗ್ಪುರ ಕಾಲೇಜಿಗೆ ಗೋಮಟೇಶ್ ಶಾಲೆಯ ವಿದ್ಯಾರ್ಥಿ ಆಯ್ಕೆ…
ಗೋಮಟೇಶ್ ವಿದ್ಯಾಪೀಠದ ವತಿಯಿಂದ ಸತ್ಕಾರ…
ಬೆಳಗಾವಿಯ ಗೋಮಟೇಶ ವಿದ್ಯಾಪೀಠದ ಗೋಮಟೇಶ ಪ್ರೌಢಶಾಲೆಯ ವಿದ್ಯಾರ್ಥಿ ಮಂಜುನಾಥ ರೇವಣಕರಗೆ ದೇಶದ ಪ್ರತಿಷ್ಠಿತ ಕಾಲೇಜ್ ಖರಗ್ಪುರದಲ್ಲಿ ಪ್ರವೇಶ ದೊರೆತಿದ್ದು, ಸಂಸ್ಥೆಯೂ ಸತ್ಕರಿಸಿ ಅಭಿನಂದಿಸಿದೆ.
ಧೀರಜ್ ಮಂಜುನಾಥ ರೇವಣಕರ ಶಾಲಾ ದಿನಗಳಲ್ಲಿ INSPIRE AWARD ಪಡೆದು ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದನು,
ರೋಟರಿ ಕ್ಲಬ್ ವತಿಯಿಂದ ಕೊಡಲ್ಪಡುವ 2023ರ BEST STUDENT ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 620 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈಗ ಖರಗ್ಪುರ ಕಾಲೇಜಿಗೆ ಆಯ್ಕೆಯಾದ ಹಿನ್ನೆಲೆ ಸಂಸ್ಥೆಯ ಅಧಿಷ್ಠತಾರಾದ ಸಂಜಯ ಬಿ ಪಾಟೀಲ, ನಿರ್ದೇಶಕರಾದ ಸನ್ನತ್ ಕುಮಾರ್, ವೃಷಭ ಪಾಟೀಲ , ಮುಖ್ಯಾಧ್ಯಾಪಕರಾದ ಸುನಿಲ ಪಾಟೀಲ ಮತ್ತು ಆಡಳಿತ ಮಂಡಳಿ, ಸಂಸ್ಥೆಯ ಎಲ್ಲ ಶಿಕ್ಷಕ ವೃಂದದವರು ಸತ್ಕರಿಸಿ ಶುಭ ಹಾರೈಸಿದ್ದಾರೆ.
Laxmi News 24×7