ಒಂಬತ್ತು ತಿಂಗಳ ಹೆಂಡತಿ ಹಾಗೂ ಆಕೆಯ ಗರ್ಭದಲ್ಲಿರುವ ದಿನ ತುಂಬಿದ ಮಗುವಿನ ಮೇಲೆ ಪ್ರಾಣವನ್ನೇ ಇಟ್ಟುಕೊಂಡ ಡಾಕ್ಟರ್ ಕೋವಿಡ್ ರೋಗಿಗಳನ್ನು ನೋಡುವ ಡ್ಯೂಟಿಯಲ್ಲಿರುವುದರಿಂದ 15 ದಿನಗಳಿಂದ ಮನೆಯತ್ತ ಮುಖ ಮಾಡಿಲ್ಲ. ಲಾಕ್‌ಡೌನ್ ಕಾರಣಕ್ಕೆ ಅತ್ತೆಮಾವರಾಗಲೀ, ಅಪ್ಪಅಮ್ಮರಾಗಲೀ ಗರ್ಭಿಣಿ ಮಿಸಸ್ ಕುಲಕರ್ಣಿಯ ಜೊತೆಗಿರಲು ಬರಲು ಸಾಧ್ಯವಾಗಿಲ್ಲ.

ಮನೆಯಲ್ಲೊಬ್ಬಳೇ ಇರುವ ಮಿಸಸ್ ಕುಲಕರ್ಣಿ ತನ್ನ ಹೊಟ್ಟೆಯಲ್ಲಿರುವ ಕಂದನೊಡನೆ ಮಾತಾಡುತ್ತಾ ಪತಿ ಹಾಗೂ ಮಗುವಿನ ಕುರಿತ ತನ್ನ ನೆನಪು ಹಾಗೂ ಕನಸುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ. ಆ ನೆನಪಲ್ಲಿ ಪತಿಯ ತುಂಬು ಪ್ರೀತಿಯಿದೆ, ತಡವಾಗಿ ವಿವಾಹವಾಗಿ, ವರ್ಷಗಳುರುಳಿದರೂ ಮಕ್ಕಳಾಗದೆ, ಎರಡು ಬಾರಿ ಗರ್ಭಪಾತವಾದ ಯಾತನೆಯಿದೆ… ಕಡೆಗೂ ಬಸಿರಾಗಿ ದಿನ ತುಂಬುತ್ತಿರುವ ಸಂತಸ, ಈ ಬಗ್ಗೆ ತನ್ನ ಪತಿಯ ವಿಶೇಷ ಸಂತೋಷ, ಕಾಳಜಿಯನ್ನೆಲ್ಲ ನೆನೆಯುತ್ತಿರುವಾಗಲೇ ಆಘಾತದ ಬರಸಿಡಿಲೊಂದು ಮಿಸಸ್ ಕುಲಕರ್ಣಿಗೆ ಬಂದೆರಗುತ್ತದೆ.
Laxmi News 24×7