Breaking News

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love

ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ
ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಮುರಗುಂಡಿ ಹೊರವಲಯದಲ್ಲಿ ನಡೆದಿದೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದಲ್ಲಿ ಅಪಘಾತ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಂಡಳಿಯ ವಿಜಯಪುರ ಬಸ್‌ ಡಿಪೋಗೆ ಸೇರಿದ ಬಸ್ ಹಾಗೂ ಕಾರ್ ಮದ್ಯ ಮುಖ ಮುಖಿ ಡಿಕ್ಕಿ. ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರ್ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ಕೊಲ್ಲಾಪೂರದಿಂದ ಅಫಜಲಪೂರ ಕಡೆಗೆ ಹೊರಟಿದ್ದ ಕಾರು, ಅಥಣಿಯಿಂದ ಮಿರಜಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರ್ ನಲ್ಲಿದ್ದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪೂರ ಮೂಲದ ರಾಹುಲ, ಗಿರೀಶ, ಸಂಗು ಸ್ಥಳದಲ್ಲಿಯೇ ಸಾವು ರಾಧಿಕಾಗೆ ಗಂಭೀರ ಗಾಯವಾಗಿದೆ.
ರಾಧಿಕಾ ಗಂಭೀರ ಗಾಯ ಹಾಗೂ ಬಸ್‌ನಲ್ಲಿದ್ದ ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ