Breaking News

ವಂದೇ ಭಾರತ ಎಕ್ಸ್​ಪ್ರೆಸ್​ ನಲ್ಲಿ ಚಕ್ರದಲ್ಲಿ ಬೆಂಕಿ ಕಂಡು ಆತಂಕದಲ್ಲಿ ಕೆಳಗಿಳಿದ ಪ್ರಯಾಣಿಕರು

Spread the love

ದಾವಣಗೆರೆ: ವಂದೇ ಭಾರತ್ ರೈಲಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು ರೈಲು ಬಿಟ್ಟು ಕೆಳಗಿಳಿದಿರುವ ಘಟನೆ ದಾವಣಗೆರೆ ರೈಲು ನಿಲ್ದಾಣದಲ್ಲಿ ನಡೆದಿದೆ.

ಧಾರವಾಡ- ಹುಬ್ಬಳಿ ಕಡೆಯಿಂದ ಆಗಮಿಸಿದ ವಂದೇ ಭಾರತ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ಆತಂಕ ಸೃಷ್ಟಿಯಾಗಿತ್ತು. ಮಾರ್ಗ ಮಧ್ಯದಲ್ಲೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಪಡಿಪಾಟಿಲು ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ರೈಲಿನ ಚಕ್ರದಲ್ಲಿ ಬೆಂಕಿ ಸಮೇತ ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣ ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ ರೈಲು ನಿಲ್ಲಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.

ಇದನ್ನು ಕಂಡ ಪ್ರಯಾಣಿಕರು ಆತಂಕದಲ್ಲೇ ಟ್ರೈನ್ ಇಳಿದಿದ್ದಾರೆ. ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ಒಂದೇ ಭಾರತ್ ಟ್ರೈನ್ ನಲ್ಲಿ ಈ ಘಟನೆ ನಡೆದಿದೆ.‌ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ದಾವಣಗೆರೆ ರೈಲು ನಿಲ್ಧಾಣದಲ್ಲಿ ನಿಲುಗಡೆ ಮಾಡಲಾಗಿತ್ತು.

ರೈಲು ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ಶತಾಬ್ದಿ ಎಕ್ಸ್‌ಪ್ರೆಸ್‌ ಟ್ರೈನ್ ಏರಿ ಬೆಂಗಳೂರಿಗೆ ತೆರಳಿದ ಘಟನೆ ನಡೆದಿದೆ.‌ ಗೇಟ್​ ಮ್ಯಾನ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು ರೈಲಿನಲ್ಲಿದ್ದ ನೂರಾರು ಜನ ನಿಟ್ಟುಸಿರು ಬಿಟ್ಟಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ