Breaking News

ದೇಗುಲ ತೆಗೆದು ದರ್ಗಾ ನಿರ್ಮಾಣ: ದರ್ಗಾಕ್ಕೆ ಹಿಂದೂ ವ್ಯಕ್ತಿ ಹೆಸರು ನಾಮಕರಣ, ಭಾವೈಕ್ಯತೆ ಸಮ್ಮಿಲನ!

Spread the love

ಯಾದಗಿರಿ, (ಜೂನ್ 26): ಜಿಲ್ಲೆಯ ಬೆಂಡೆಬೆಂಬಳಿ ಗ್ರಾಮದಲ್ಲಿ (Bendebembli village) ಹಿಂದೂ–ಮುಸ್ಲಿಂ (Hindu Muslim) ಭಾವೈಕ್ಯತೆ ಸಮ್ಮಿಲನವಾಗಿದೆ. ಹೌದು…ದೇವಸ್ಥಾನವನ್ನು (Temple) ತೆಗೆದು ದರ್ಗಾವನ್ನು ನಿರ್ಮಾಣ ಮಾಡಿ ಅದಕ್ಕೆ ಹಿಂದೂ ವ್ಯಕ್ತಿ ಹೆಸರು ನಾಮಕರಣ ಮಾಡಲಾಗಿದೆ. ಈ ರೀತಿಯ ಭಾವೈಕ್ಯತೆ ಯಾದಗಿರಿಯ (Yadgir) ಬೆಂಡೆಬೆಂಬಳಿ ಗ್ರಾಮ ಸಾಕ್ಷಿಯಾಗಿದೆ. ಹಿಂದೂ ಮುಸ್ಲಿಂ ಎನ್ನದೇ ಇಡೀ ಗ್ರಾಮದ ಜನ ಸೇರಿ ಲಕ್ಷಾಂತರ ರೂ. ಖರ್ಚು ಮಾಡಿ ಹಿಂದೂ ವ್ಯಕ್ತಿ ಹೆಸರಿನಲ್ಲಿ ದರ್ಗಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಬೆಂಡೆಬೆಂಬಳಿ ಎನ್ನುವ ಒಂದು ಹಳ್ಳಿ ಸಮಾಜಕ್ಕೆ ಭಾವೈಕ್ಯತೆ ಸಂದೇಶ ಸಾರಿದೆ. ಇನ್ನು ದೇಗುಲವನ್ನು ತೆಗೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದರ್ಗಾವನ್ನು ಏಕೆ ನಿರ್ಮಿಸಲಾಯ್ತು? ಮುಸ್ಲಿಮರ ದರ್ಗಾಕ್ಕೆ ಏಕೆ ಹಿಂದೂ ವ್ಯಕ್ತಿ ಹೆಸರಿಡಲಾಯ್ತು ಎನ್ನುವುದಕ್ಕೆ ಒಂದು ಕಾರಣ ಸಹ ಇದೆ. ಅದು ಈ ಕೆಳಗಿನಂತಿದೆ ನೊಡಿ

ದೇವಸ್ಥಾನ ತೆಗೆದು ದರ್ಗಾ ನಿರ್ಮಾಣ

ಇನ್ನು ಈ ದರ್ಗಾ ನಿರ್ಮಾಣಕ್ಕೂ ಮುನ್ನ ಈ ಜಾಗದಲ್ಲಿ ಚಿಕ್ಕದೊಂದು ಮಂದಿರವಿತ್ತು. ಅದೆ ಈ ದರ್ಗಾದಲ್ಲಿರುವ ಈರಣ್ಣನ ಮುತ್ಯಾನ ಮಂದಿರ. 283 ವರ್ಷಗಳ ಹಿಂದೆ ಗ್ರಾಮಸ್ಥರು ಮಂದಿರವನ್ನ ನಿರ್ಮಾಣ ಮಾಡಿ ನಿತ್ಯ ಪೂಜೆಯನ್ನ ಮಾಡುತ್ತಿದ್ದರು. ಈಗ ಚಿಕ್ಕದಾಗಿದ್ದ ಮಂದಿರವನ್ನ ತೆಗೆದು ಹಾಕಿ ದರ್ಗಾವನ್ನ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಈ ದರ್ಗಾಕ್ಕೆ ಈರಣ್ಣ ಮುತ್ಯಾನ ದರ್ಗಾ ಎಂದು ನಾಮಕರಣ ಮಾಡಿದ್ದಾರೆ. ಅರೇ ಇದೇನಿದು ಹಿಂದೂ ವ್ಯಕ್ತಿ ಹೆಸರನ್ನು ಮುಸ್ಲಿಮರ ದರ್ಗಾಕ್ಕೆ ಇಟ್ಟಿದ್ದಾರೆ ಎಂದು ಅಚ್ಚರಿಯಾದರೂ ಸತ್ಯ.

ದರ್ಗಾಕ್ಕೆ ಹಿಂದೂ ವ್ಯಕ್ತಿ ಹೆಸರು

ಬೆಂಡೆಬೆಂಬಳಿ ಗ್ರಾಮದ ಜನರ ಸಮಾಜಕ್ಕೆ ಮಾದರಿ ಹಾಗೂ ಭಾವೈಕ್ಯತೆಯ ಸಂದೇಶವನ್ನ ಸಾರುವ ಕೆಲಸ ಮಾಡಿದ್ದಾರೆ. ಯಾಕೆಂದ್ರೆ ಹಿಂದೂ ವ್ಯಕ್ತಿ ಹೆಸರಲ್ಲಿ ದರ್ಗಾ ನಿರ್ಮಾಣ ಮಾಡಿದ್ದು, ಇಂದು (ಜೂನ್ 26) ದರ್ಗಾವನ್ನ ಲೋಕಾರ್ಪಣೆ ಮಾಡಿ ಜನರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಇಡೀ ಗ್ರಾಮದ ಜನ ಇವತ್ತು ನೈವೇದ್ಯವನ್ನ ಮಾಡಿಕೊಂಡು ಬಂದು ಈ ದರ್ಗಾದಲ್ಲಿರುವ ದೇವರಿಗೆ ಅರ್ಪಣೆ ಮಾಡಿದ್ದಾರೆ. ಈ ದರ್ಗಾಕ್ಕೆ ಈಗಿನಿಂದ ಗ್ರಾಮಸ್ಥರೆಲ್ಲ ಸೇರಿ ಈರಣ್ಣನ ಮುತ್ಯಾನ ದರ್ಗಾ ಎಂದು ಹೆಸರಿಡಲಾಗಿದೆ


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ