Breaking News

ಮೂರು ದಿನದಲ್ಲಿ ಉತ್ತರಿಸುವಂತೆ ಕಾಂತಾರ ಚಿತ್ರ ತಂಡಕ್ಕೆ ನೋಟಿಸ್: ಶಿವಮೊಗ್ಗ ಡಿಸಿ

Spread the love

ಶಿವಮೊಗ್ಗ: ಕಾಂತಾರಾ -1 ಚಿತ್ರೀಕರಣದ ವೇಳೆ ದೋಣಿ ಮಗುಚಿ 30 ಜನ ಈಜಿ ದಡ ಸೇರಿದದ್ದು, ಒಂದು ಆಂಬ್ಯುಲೆನ್ಸ್ ಚಿತ್ರೀಕರಣ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿದೆ ಎಂದು ವರದಿಯಾದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂತಾರಾ -1 ಚಿತ್ರ ತಂಡಕ್ಕೆ ಹೊಸನಗರ ತಹಶೀಲ್ದಾರ್ ರೇಷ್ಮಾ ಅವರು ಇಂದು ನೋಟಿಸ್ ನೀಡಿದ್ದಾರೆ.

‘ನೀವು ಚಿತ್ರಿಕರಣ ನಡೆಸುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆದರೆ ಘಟನೆ ಬಗ್ಗೆ ಹೊಂಬಾಳೆ ಫಿಲ್ಮಂ ವತಿಯಿಂದ ಸ್ಪಷ್ಟೀಕರಣ ನೀಡಲಾಗಿದ್ದರೂ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ನಗರ ಹೋಬಳಿಯ ಕಂದಾಯ ನಿರೀಕ್ಷಕರು ನಿಮ್ಮ ಸಂಸ್ಥೆಯ ಮ್ಯಾನೇಜರ್ ಅವರಿಗೆ ಅನುಮತಿ ಪತ್ರಗಳನ್ನು ಹಾಜರು ಪಡಿಸಲು ದೂರವಾಣಿ ಮೂಲಕ ಸಂರ್ಪಕಿಸಿದ್ದರೂ ನೀವು ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ದಿನಾಂಕ 15 ರಂದು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಅವಶ್ಯಕವಿದೆ. ಆದ್ದರಿಂದ ಸಮರ್ಪಕ ದಾಖಲೆಗಳೊಂದಿಗೆ ಈ ನೋಟಿಸ್ ತಲುಪಿದ ಮೂರು ದಿನದ ಒಳಗೆ ಸಮಜಾಯಿಸಿ ನೀಡಬೇಕು. ತಪ್ಪಿದಲ್ಲಿ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ’ ಕಾಂತಾರ ದಿ ಲೆಜೆಂಡ್ ಭಾಗ-1 ರ ನಿರ್ಮಾಣ ಮೇಲ್ವಿಚಾರಕರಾದ ಚಿದಾನಂದ ಅವರಿಗೆ ತಹಶೀಲ್ದಾರ್ ನೋಟಿಸ್​ನಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ