Breaking News

ಧಾರವಾಡದ ಕ್ಯಾರಕೊಪ್ಪದಲ್ಲಿ ಶಿಕ್ಷಕರ ಮನೆಗೆ ಕನ್ನ…. 70 ಗ್ರಾಂ ಚಿನ್ನಾಭರಣ, ನಗದು ಲೂಟಿ

Spread the love

ಧಾರವಾಡದ ಕ್ಯಾರಕೊಪ್ಪದಲ್ಲಿ ಶಿಕ್ಷಕರ ಮನೆಗೆ ಕನ್ನ…. 70 ಗ್ರಾಂ ಚಿನ್ನಾಭರಣ, ನಗದು ಲೂಟಿ
ರಜೆ ಮೇಲೆ ಬೇರೆ ಊರಿಗೆ ತೆರಳಿದ್ದ ಇಬ್ಬರು ಶಿಕ್ಷಕರ ಮನೆಗಳಿಗೆ ಕನ್ನ ಹಾಕಿದ ಚಾಲಾಕಿ ಖದೀಮ ಕಳ್ಳರು, ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡದ ಕ್ಯಾರಕೊಪ್ಪ ಗ್ರಾಮದ ಬಳಿ ನಡೆದಿದೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಲೋಕನಾಥ್ ಮತ್ತು ಸೋಮನಗೌಡ ಪಾಟೀಲ್ ಎನ್ನುವವರ ಮನೆಯಲ್ಲೇ ಕಳ್ಳತನವಾಗಿದೆ. ಇಬ್ಬರು ವೃತಿಯಲ್ಲಿ ಶಿಕ್ಷಕರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ರಜೆ ಇರುವ ಕಾರಣ ಊರಿಗೆ ಹೋಗಿದ್ದರು.
ಈ ವೇಳೆ ಶಿಕ್ಷಕರ ಮನೆಯಲ್ಲಿದ್ದ 70 ಗ್ರಾಂ ಚಿನ್ನ ಸೇರಿ 1.20 ಲಕ್ಷ ಹಣ ಕಳ್ಳತನ ಮಾಡಲಾಗಿದೆ. ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ