Breaking News

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ…

Spread the love

ಬಾಗಲಕೋಟೆ : ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ…
ವಿಚಾರಣಾ ವರದಿಗೆ 2 ತಿಂಗಳ ಗಡುವು ನೀಡಿದ ಶಿಕ್ಷಣ ಇಲಾಖೆ…
ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರ ಭಾಗ್ಯ ಹಾಲಿನಪುಡಿ ಮತ್ತು ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಶಿಕ್ಷಣ ಇಲಾಖೆ ವಿಚಾರಣಾ ವರದಿಗೆ ಎರಡು ತಿಂಗಳ ಗಡುವು ನೀಡಿದೆNo photo description available.
ಬಾಗಲಕೋಟೆ ಜಿಲ್ಲೆಯಲ್ಲಿ ನೋಟಿಸ್ ಪಡೆದ ಶಿಕ್ಷಕ ಸಮುದಾಯದಲ್ಲಿ ಶುರುವಾಯ್ತು ಆತಂಕ ಶುರುವಾಗಿದೆ ಪ್ರಕರಣ ಸಂಬಂಧ 60 ಜನ ವಿಚಾರಾಣಾಧಿಕಾರಿ & ಮಂಡನಾಧಿಕಾರಿ ನೇಮಕಕ್ಕೆ ಡಿಡಿಪಿಐ ಆದೇಶ ಮಾಡಿದ್ದಾರೆ. ಆರೋಪ ಎದುರಿಸಿದ ಶಿಕ್ಷಕರಿಗೆ ಇದುವರೆಗೆ 4 ಬಾರಿ ನೋಟಿಸ್ ನೀಡಿದ್ದರೂ ಸಮರ್ಪಕ ಉತ್ತರ ನೀಡದ ಬೆನ್ನಲ್ಲೆ ಸಧ್ಯ ವಿಚಾರಾಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯ ಬೀಳಗಿ, ಹುನಗುಂದ , ಬಾದಾಮಿ ತಾಲೂಕಿನ 60 ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವಿಚಾರಣೆ ಮಾಡಲಾಗಿದೆ ಹಾಲಿನಪುಡಿ ಸೇರಿ ವಿವಿಧ ವಸ್ತುಗಳ ನಿರ್ವಹಣೆ ಕುರಿತು ನೋಟಿಸ್ ನೀಡಲಾಗಿತ್ತು. ಆರೋಪಗಳ ಕುರಿತು ನಿಯಮಾನುಸಾರ ವಿಚಾರಣೆ ನಡೆಸಿ ಸ್ಪಷ್ಟ ನಿರ್ಣಯ ನೀಡಲು ಆದೇಶ ಮಾಡಲಾಗಿದೆ. ಇಲಾಖೆಯ ಶಿಸ್ತು ಪ್ರಾಧಿಕಾರವಾಗಿರುವ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಬೇಕು. ವರದಿಯನ್ನು ಸಲ್ಲಿಸಲು ವಿಚಾರಣಾಧಿಕಾರಿಗಳಿಗೆ 2 ತಿಂಗಳ ಗಡುವು ನೀಡಿ ಡಿಡಿಪಿಐ ಎಚ್.ಜಿ.ಮಿರ್ಜಿ ಆದೇಶ ಮಾಡಿದ್ದಾರೆ
ಸಿದ್ದಪ್ಪ ಎಂಬ ಸಬ್ ಲೀಸ್ ದಾರ ಶಿಕ್ಷಕರಿಂದ ಹಾಲಿನಪುಡಿ ಸೇರಿ ವಿವಿಧ ವಸ್ತು ಖರೀದಿಸಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮಾರಿಕೊಳ್ಳಲಾಗಿದೆ. ಈ ಕುರಿತು ಸಿಇಎನ್ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೀಕ್ಷಕರೆ ಪ್ರಕರಣ ಹಿನ್ನೆಲೆಯನ್ನು ಒಮ್ಮೆ ಕೇಳಿಬಿಡಿ….
ರಾಜ್ಯವಲ್ಲದೆ ನೆರೆಯ ರಾಜ್ಯಕ್ಕೆ ಸೇರುತ್ತಿದ್ದ ರಾಜ್ಯ ಸರ್ಕಾರದ ಮಹತ್ಕಾಂಕ್ಷಿ ಕ್ಷೀರ ಭಾಗ್ಯ ಯೋಜನೆಯ ಹಾಲು ಶಾಲಾ ಮುಖ್ಯ ಶಿಕ್ಷಕರಿಂದ ಕಡಿಮೆ ದರದಲ್ಲಿ ಹಾಲಿನ ಪುಡಿ ಖರೀದಿಸಿ ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದ ಖದೀಮರು ಬಾಗಲಕೋಟೆ ಸಿಇಎನ್ ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಆರೋಪಿ ಸಿದ್ದಪ್ಪ 2024 ಅಕ್ಟೋಬರ್ 4 ರಂದು ಬಾಗಲಕೋಟೆ ಜಿಲ್ಲೆಯ ಸೂಳಿಕೇರಿ ಗ್ರಾಮದಲ್ಲಿ ಸಿಇಎನ್ ಠಾಣೆ ಪೋಲಿಸರಿಂದ ದಾಳಿ ನಡೆದಿತ್ತು. ಜಿಲ್ಲೆಯಲ್ಲಿ ಹಾಲಿನ ಪೌಡರ್ ವಿತರಣೆಗೆ ಸಬ್ ಲೀಜ್ ಪಡೆದು ಗೋಲಮಾಲ್ ಮಾಡಿದ್ದ ಆರೋಪಿ ಸಿದ್ದಪ್ಪ ಇತ್ತ ಜಿಲ್ಲೆಯಲ್ಲಿ ಕ್ಷೇರಭಾಗ್ಯ ಹಾಲಿನ ಪೌಡರ್ ಸರಬರಾಜು ಮಾಡಲು ಟೆಂಡರ್ ಪಡೆದಿದ್ದ ಶ್ರೀಶೈಲನಿಂದ ಸಬ್ ಲೀಜ್ ಪಡೆದ ಆರೋಪಿ ಸಿದ್ದಪ್ಪನಿಂದ ಗೋಲಮಾಲ್ ನಡೆದಿತ್ತು
ಬುಲೆರೋ ಗೂಡ್ಸ್ ವಾಹನದಲ್ಲಿ ಹಾಲಿನ ಪೌಡರ್, ರಾಗಿ ಹಿಟ್ಟು,ಅಡುಗೆ ಎಣ್ಣೆ ಸಾಗಿಸಲು ಮುಂದಾಗಿದ್ದ ಸಿದ್ದಪ್ಪನ ಹೆಡೆಮುರಿ ಕಟ್ಟಿದ್ದ ಪೊಲೀಸರು. ಕ್ಷೀರಭಾಗ್ಯ ಹಾಲಿನ ಪೌಡರ್, ರಾಗಿ ಹಿಟ್ಟು,ಅಡುಗೆ ಎಣ್ಣೆ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಆರೋಪಿ ಸಿದ್ದಪ್ಪ
ಒಟ್ಟು 4,475 ಕೆಜಿ ಹಾಲಿ ಪೌಡರ್ ಸಂಗ್ರಹಿಸಿದ್ದ ಆರೋಪಿ. ರಾತ್ರಿ ಬಳಿಕ ಮಹಾರಾಷ್ಟ್ರಕ್ಕೆ ಕಳಿಸಲು ಗೂಡ್ಸ್ ಗಾಡಿಗೆ ಲೋಡ್ ಮಾಡಿಸುತ್ತಿದ್ದ ಸಿದ್ದಪ್ಪನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿತ್ತು
ಒಟ್ಟು 18 ಲಕ್ಷ ಮೌಲ್ಯದ ಸರ್ಕಾರಿ ಯೋಜನೆಯಲ್ಲಿ ಹಂಚಿಕೆಯಾಗಿದ್ದ ಪದಾರ್ಥ ವಶಕ್ಕೆ ಪಡೆದಿದ್ದ ಸಿಇಎನ್ ಠಾಣೆ ಪೊಲೀಸರು. ಪ್ರಕರಣದಲ್ಲಿ ಆರೋಪಿ ಸಿದ್ದಪ್ಪ ಸೇರಿ ಮೂವರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಸಿಇಎನ್ ಠಾಣೆ ಪೋಲಿಸರಿಂದ ಪ್ರಕರಣ ದಾಖಲಾಗಿತ್ತು‌.

Spread the love

About Laxminews 24x7

Check Also

ಸಿದ್ದರಾಮಯ್ಯಗೆ ಬಂಜಾರ ವಿಚಾರ ಗೊತ್ತಿಲ್ಲ: ಪಿ. ರಾಜೀವ್ ಆರೋಪ

Spread the loveಬಾಗಲಕೋಟೆ, ಮಾರ್ಚ್ 27: ಉಪಚುನಾವಣೆ ಹಿನ್ನೆಲೆ ಬಾಗಲಕೋಟೆ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಸಂದರ್ಭದಲ್ಲಿ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ