Breaking News

ಫೈನಲ್‌ನಲ್ಲಿ ಆರ್‌ಸಿಬಿಯೇ ಗೆಲ್ಲಲಿ ಎಂದು ಬಯಸುತ್ತೇನೆ: ಅನಿಲ್ ಕುಂಬ್ಳೆ

Spread the love

ಬೆಂಗಳೂರು: ಐಪಿಎಲ್‌ ಫೈನಲ್‌ನಲ್ಲಿ ಈ ಬಾರಿ ಯಾರೇ ಗೆದ್ದರೂ, ಹೊಸಬರೇ ಚಾಂಪಿಯನ್ ಆಗುತ್ತಾರೆ‌. ಆದರೂ ಆರ್‌ಸಿಬಿ ತಂಡವೇ ಗೆಲ್ಲಲಿ ಎಂದು ಬಯಸುತ್ತೇನೆ ಎಂದು ಆರ್‌ಸಿಬಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಕರ್ನಾಟಕ ಅರಣ್ಯ‌ ಮತ್ತು ವನ್ಯಜೀವಿ ಇಲಾಖೆಯ ರಾಯಭಾರಿಯೂ ಆಗಿರುವ ಅನಿಲ್ ಕುಂಬ್ಳೆ ಅವರು ಇಂದು ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾದ ಬಳಿಕ ಮಾತನಾಡಿದರು.

“ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಎರಡೂ ತಂಡಗಳಲ್ಲಿಯೂ ನಾನು ಇದ್ದೆ. ಈ ಹಿಂದೆ ಆರ್‌ಸಿಬಿ ತಂಡದ ನಾಯಕನಾಗಿದ್ದೆ. ಈ ಬಾರಿ ಸಂತಸದ ವಿಷಯವೆಂದರೆ ಯಾರೇ ಗೆದ್ದರೂ ಹೊಸಬರೇ ಗೆದ್ದಂತಾಗುತ್ತದೆ. ಆರ್‌ಸಿಬಿಯಲ್ಲಿ ಈ ಬಾರಿ ವಿರಾಟ್ ಕೊಹ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಆರ್‌ಸಿಬಿ ತಂಡ ಗೆಲ್ಲಬೇಕೆಂದು ನಾನು ಬಯಸುತ್ತೇನೆ” ಎಂದರು.ವನ್ಯಜೀವಿಗಳ ಬಗ್ಗೆ ನನಗೆ ಕಾಳಜಿ ಇದೆ: ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನನಗೆ ಜವಾಬ್ದಾರಿ ನೀಡಿ ಸರ್ಕಾರ ಒಂದು‌ ಅವಕಾಶ ಕೊಟ್ಟಿದೆ. ಮುಂಚೆಯೂ ನಾನು ವನ್ಯಜೀವಿ ಮಂಡಳಿ ಉಪಾಧ್ಯಕ್ಷನಾಗಿದ್ದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಅರಣ್ಯ ಸಚಿವರು ಈ ಅವಕಾಶ ಕೊಟ್ಟಿದ್ದಾರೆ. ವನ್ಯಜೀವಿಗಳ ಮೇಲೆ ನನಗೆ ಕಾಳಜಿಯಿದೆ. ನನ್ನ ಕೈಯಲ್ಲಾಗುವ ಸೇವೆಯನ್ನು ನಾನು ಸಲ್ಲಿಸುತ್ತೇನೆ. ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಲು ಮಾಧ್ಯಮಗಳ ಸಹಕಾರ ಕೂಡಾ ಮುಖ್ಯ ಎಂದು ಹೇಳಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ