Breaking News

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಚಿಕ್ಕೋಡಿ ಘಟಕದ ಪದಾಧಿಕಾರಿಗಳ ಆಯ್ಕೆ…

Spread the love

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಚಿಕ್ಕೋಡಿ ಘಟಕದ ಪದಾಧಿಕಾರಿಗಳ ಆಯ್ಕೆ…
ಬೆಳಗಾವಿ : ಕೆಲ ತಿಂಗಳಗಳ ಹಿಂದಷ್ಟೇ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಪ್ರಾರಂಭ ಮಾಡಲಾಗಿತು. ಈ ಸಂಸ್ಥೆಯ ಅಂಗವಾದ ಚಿಕ್ಕೋಡಿ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಅನ್ನು ಇಂದು ಪ್ರಾರಂಭ ಮಾಡಿ ಅಧ್ಯಕ್ಷ, ಉಪಾಧ್ಯಕ್ಣ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಖಜಾಂಚಿಯನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಬೆಳಗಾವಿ ಕನ್ನಡ ಸಾಹಿತ್ಯ ಭವ‌‌ನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ ಫಸ್ಟ್ ಹಿರಿಯ ವರದಿಗಾರ ಬೆಳಗಾವಿ, ಅಧ್ಯಕ್ಷ ಸಿದ್ದೇಶ ಪುಟಾಣೆ, ಪವರ್ ಟಿವಿ ವರದಿಗಾರ ಚಿಕ್ಕೋಡಿ, ಉಪಾಧ್ಯಕ್ಷ ಅಜಿತ್ ಸಣ್ಣಕ್ಕಿ, ಗ್ಯಾರಂಟಿ ನ್ಯೂಸ್ ಉತ್ತರ ಕರ್ನಾಟಕ ಹೆಡ್ ಬೆಳಗಾವಿ, ಪ್ರಧಾನ ಕಾರ್ಯದರ್ಶಿ ಸಂಜೀವ ಅರಭಾವಿ, ಆರ್.ಕನ್ನಡ ವರದಿಗಾರ ಚಿಕ್ಕೋಡಿ, ಸಹ ಕಾರ್ಯದರ್ಶಿ ಸಂಜಯ ಕೌಲಗಿ, ನ್ಯೂಸ್ ಫಸ್ಟ್ ವರದಿಗಾರ ಚಿಕ್ಕೋಡಿ, ಖಜಾಂಚಿ ದುರದುಂಡಯ್ಯ ಹಿರೇಮಠ, ಗ್ಯಾರಂಟಿ ನ್ಯೂಸ್ ವರದಿಗಾರ ಚಿಕ್ಕೋಡಿ ಆಯ್ಕೆಯಾಗಿದ್ದಾರೆ.
ಇನ್ನಿತರ ಎಲ್ಲ ವರದಿಗಾರರು, ಕ್ಯಾಮರಾಮನ್ ಗಳು ಚಿಕ್ಕೋಡಿ ಘಟಕದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಜಿಲ್ಲಾಧ್ಯಕ್ಷ ಮಂಜುನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಸುಗಂಧಿ, ಸಹ ಕಾರ್ಯದರ್ಶಿ ಶ್ರೀಧರ ಕೊಟಾರಗಸ್ತಿ, ಸದಸ್ಯರಾದ ಸಂತೋಷ ಶ್ರೀರಾಮುಡು, ಸಹದೇವ ಮಾನೆ, ಮೈಲಾರಿ ಪಟಾತ, ಸಿದ್ದನಗೌಡ ಪಾಟೀಲ, ರಾಜೇಶ ಹೂಗಾರ, ಪ್ರಹ್ಲಾದ ಪೂಜೇರಿ, ಅಡಿವೆಪ್ಪ ಪಾಟೀಲ ಅವರ ಉಪಸ್ಥಿತಿಯಲ್ಲಿ ಚಿಕ್ಕೋಡಿ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಚಿಕ್ಕೋಡಿ ಘಟಕ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಅಸೋಷಿಯನ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ