Breaking News

ಬೆಳಗಾವಿ ಕ್ಯಾಂಪ್ ಧೋಬಿ ಘಾಟ್’ನಲ್ಲಿ ಉದ್ಯಾನವನ 18 ಲಕ್ಷದ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ….

Spread the love

ಬೆಳಗಾವಿ ಕ್ಯಾಂಪ್ ಧೋಬಿ ಘಾಟ್’ನಲ್ಲಿ ಉದ್ಯಾನವನ…ನೀರು ಕೊಯ್ಲು ವ್ಯವಸ್ಥೆ…
18 ಲಕ್ಷದ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ….
ಬೆಳಗಾವಿಯ ಕ್ಯಾಂಪ್ ಧೋಬಿ ಘಾಟ್ ಪ್ರದೇಶದಲ್ಲಿ ಉದ್ಯಾನವನ ಮತ್ತು ನೀರು ಕೊಯ್ಲು ವ್ಯವಸ್ಥೆಗೆ ಉತ್ತರ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.
ಬೆಳಗಾವಿಯ ಕ್ಯಾಂಪ್ ಧೋಬಿ ಘಾಟ್ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ 19 ಲಕ್ಷ ರೂಪಾಯಿ ಅನುದಾನದಲ್ಲಿ ಸುಸಜ್ಜಿತ ಉದ್ಯಾನವನ ಮತ್ತು ನೀರು ಕೊಯ್ಲು ವ್ಯವಸ್ಥೆ ನಿರ್ಮಾಣಕ್ಕೆ ಉತ್ತರ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.
ಈ ವೇಳೆ ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ ಅವರು, ಎಂ.ಎಲ್.ಐ.ಆರ್.ಸಿಯ ಬ್ರಿಗೇಡಿಯರ್, ದಂಡು ಮಂಡಳಿಯ ಮಾಜಿ ಸದಸ್ಯರು, ಸಿಇಓ ಹಾಗೂ ಅಧಿಕಾರಿಗಳು ಹಲವಾರು ದಿನಗಳಿಂದ ನೀರು ಕೊಯ್ಲಿಗೆ ಹೆಚ್ಚು ಮುತುವರ್ಜಿಯನ್ನು ವಹಿಸಿದ್ದಾರೆ. ಬುಡಾ ಆಯುಕ್ತರೊಂದಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಿದಿಂದ 19 ಲಕ್ಷ ರೂಪಾಯಿಯಲ್ಲಿ ಇಲ್ಲಿ ಒಂದು ಸುಸಜ್ಜ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ. ಮಾನ್ಸೂನ್ ಆರಂಭವಾಗುವ ಮುನ್ನ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ಧೇಶವನ್ನು ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಕೀಲ್ ಅಹ್ಮದ್, ದಂಡು ಮಂಡಳಿಯ ಮಾಜಿ ಸದಸ್ಯರಾದ ಸಾಝೀದ್ ಶೇಖ್, ಡಾ. ರಾಹೀಲಾ ಶೇಖ್, ಅಲ್ಲೇದ್ಧಿನ ಕಿಲ್ಲೇದಾರ, ರಿಝ್ವಾನ್ ಬೇಪಾರಿ, ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೀವ್ ಕುಮಾರ್, ಗುತ್ತಿಗೆದಾರರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ತರಳಬಾಳು ಹುಣ್ಣಿಮೆ ವೇದಿಕೆ | ದೂಷಣೆ ಬಿಟ್ಟು ಒಂದಾಗಿ: ಶ್ರೀಗಳ ತಾಕೀತು.

Spread the loveಭದ್ರಾವತಿ (ಶಿವಮೊಗ್ಗ): ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವು ‘ದಾವಣಗೆರೆ ರಾಜಕಾರಣ’ದ ರಾಜಿ ಪಂಚಾಯಿತಿಗೆ ವೇದಿಕೆ ಆಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ