Breaking News

ಮಳೆಯಲ್ಲಿಯೇ ಗ್ರಾಮ ದೇವತೆಗಳ ಹೊನ್ನಾಟ!

Spread the love

ಮಳೆಯಲ್ಲಿಯೇ ಗ್ರಾಮ ದೇವತೆಗಳ ಹೊನ್ನಾಟ!
ಸುರಿಯುವ ಮಳೆಯಲ್ಲಿಯೇ ದೇವಿಯರ ಹೊನ್ನಾಟ ನಡೆಯುವ ವಿಶೇಷತೆಹೊಂದಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದೇವಿಯರ ಜಾತ್ರೆ ಈ ಸಲವೂ ಸುರಿಯುವ ಮಳೆಯ ಮಧ್ಯೆಯೇ ಅದ್ದೂರಿಯಾಗಿ ನಡೆಯಿತು. ಪ್ರತಿ ಐದು ವರ್ಷಕ್ಕೊಮ್ಮೆ ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ಎರಡು ದಿನದ ಹೊನ್ನಾಟ ಯಶಸ್ವಿಯಾಗಿ ನಡೆಯುತ್ತಿದೆ.
ಸಾಮಾನ್ಯವಾಗಿ ಗ್ರಾಮದೇವಿಯರ ಜಾತ್ರೆಗಳಲ್ಲಿ ಭಂಡಾರದ ಮಧ್ಯೆ ಹೊನ್ನಾಟ ನಡೆಯೋ ಸಂಪ್ರದಾಯವಿದೆ. ಆದರೆ ಅವರೊಳ್ಳಿ-ಬಿಳಕಿ ದೇವಿಯರ ಜಾತ್ರೆಯಲ್ಲಿ ಭಂಡಾರದ ಜೊತೆಗೆ ಸುರಿಯುವ ಮಳೆಯಲ್ಲಿ ದೇವಿಯರ ಹೊನ್ನಾಟ ನಡೆದಿದೆ. ಎರಡು ದಿನದ ಹೊನ್ನಾಟದ ಬಳಿಕ ದೇವಿಯರನ್ನು ವಿಶೇಷವಾಗಿ ದಂಡ ಯುದ್ಧದ ಮೂಲಕ ಸೀಮೆಗೆ ಕಳುಹಿಸಿಕೊಡಲಾಯಿತು‌.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ