16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಗೆ ಸಹಕಾರ….
ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸತ್ಕರಿಸಿದ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್
ಬೆಳಗಾವಿ ಜಿಲ್ಹಾ ದೇಹದಾರ್ಢ್ಯಪಟುಗಳ ಸಂಘಟನೆ ಮತ್ತು ರೋಟರಿ ಕ್ಲಬ್ ಆಫ್ ಬೆಲಗಾಮ್’ನ ವತಿಯಿಂದ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿಯಲ್ಲಿ ರೋಟರಿ ಅನ್ನೋತ್ಸವದ ವೇಳೆ ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ , ಕರ್ನಾಟಕ ಸ್ಫೋರ್ಟ್ಸ್ ಅಥಾರಿಟಿಯಿಂದ ಮಾನ್ಯತೆ ಪಡೆದ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಬೆಳಗಾವಿ ಜಿಲ್ಲಾ ಸಂಘಟೆಯ ವತಿಯಿಂದ 16ನೇ ರಾಷ್ಟ್ರೀಯ ಸಿನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು
ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಗದು ಬಹುಮಾನ ಪುರಸ್ಕರಿಸಿದರು. ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಅವಿನಾಶ ಪೋತದಾರ, ಸುಹಾಸ್ ಚಾಂಡಕ್, ಅಜೀತ್ ಸಿದ್ಧಣ್ಣವರ, ಎಸ್. ಗಂಗಾಧರ, ಸುಶೀಲ್ ಪವಾರ, ಬಸವರಾಜ್ ಅರಳಿಮಟ್ಟಿ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7