Breaking News

ನರೇಗಾ ಯೋಜನೆಯಡಿ ಕೆರೆ ಹೂಳೆತ್ತುತ್ತಿದ್ದಾನೆ ಬಿಕಾಂ ಮುಗಿಸಿದ ಯುವಕ

Spread the love

ಧಾರವಾಡ: ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಕೆಲಸ ನೀಡಿದೆ. ಕೆರೆ ಹೂಳೆತ್ತುವ ಈ ಕಾರ್ಯಕ್ಕೆ ಈಗ ಪದವಿ ಮುಗಿಸಿದವರೂ ಬರುವಂತಾಗಿದೆ.

ಜಿಲ್ಲೆಯ ಪ್ರಭುನಗರ ಹೊನ್ನಾಪುರ ಗ್ರಾಮದ ಪದವಿ ಮುಗಿಸಿದ ಯುವಕ ಪ್ರಕಾಶ್ ಕೆರೆ ಹೂಳೆತ್ತುವ ಕಾಮಗಾರಿಗೆ ಬರುತ್ತಿದ್ದಾನೆ. ಬಿಕಾಂ ಮುಗಿಸಿರುವ ಇವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ನರೇಗಾ ಕಾಮಗಾರಿ ಆರಂಭವಾಗುತಿದ್ದಂತೆ ಇವರು ಸಹ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದಾರೆ. ದಿನಕ್ಕೆ 275 ರೂ.ಗಳಿಗೆ ಕೂಲಿ ಮಾಡುತ್ತಿದ್ದು, ವಾರಕ್ಕೆ 1,925 ರೂ.ಗಳನ್ನ ಗಳಿಸಿ ಜೀವನ ಸಾಗಿಸುತಿದ್ದಾರೆ. 

ಲಾಕ್‍ಡೌನ್ ಪರಿಣಾಮವಾಗಿ ಕೆಲಸ ಇಲ್ಲದ ಪದವೀಧರರು ಸಹ ನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತಿದ್ದಾರೆ. ಅಲ್ಲದೆ ರೈತರ ಬಳಿ ಕೂಲಿ ಕೆಲಸಕ್ಕೆ ಹೋಗುತಿದ್ದ ಹಲವು ಕಾರ್ಮಿಕರು ಹಾಗೂ ಕಡಿಮೆ ಜಮೀನು ಇರುವ ರೈತರಿಗೆ ನರೇಗಾ ಆಸರೆಯಾಗಿದೆ. ಸದ್ಯ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಕೆರೆ ಕೆಲಸ ಮುಗಿನ ನಂತರ ನರೇಗಾದಲ್ಲಿ ಬೇರೆ ಕೆಲಸ ಸಿಕ್ಕರೆ ಜನ ಅಲ್ಲಿಗೇ ಹೋಗಲಿದ್ದಾರೆ.


Spread the love

About Laxminews 24x7

Check Also

ವಿನಯ್ ಕುಲಕರ್ಣಿ ದೋಷಿ ಇಂದು ಶಿಕ್ಷೆ ಪ್ರಮಾಣ ಪ್ರಕಟ

Spread the loveಧಾರವಾಡ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ  ಯೋಗೇಶ್‌ಗೌಡ  ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ