Breaking News

ಬೆಳಗಾವಿಯ ಪೊಲೀಸ್ ಹೆಡ್’ಕ್ವಾಟರ್ಸ್’ನಲ್ಲಿರುವ ಹಜರತ್ ಸಯ್ಯದ ಕೇಶರಶಾಹವಲಿ ಪೀರ ಅವರ ಗಂಧ ಮತ್ತು ಉರುಸು ಶರೀಪ್ ಕಾರ್ಯಕ್ರಮ

Spread the love

ಬೆಳಗಾವಿಯ ಪೊಲೀಸ್ ಹೆಡ್’ಕ್ವಾಟರ್ಸ್’ನಲ್ಲಿರುವ ಹಜರತ್ ಸಯ್ಯದ ಕೇಶರಶಾಹವಲಿ ಪೀರ ಅವರ ಗಂಧ ಮತ್ತು ಉರುಸು ಶರೀಪ್ ಕಾರ್ಯಕ್ರಮವು ಇಂದಿನಿಂದ ಉತ್ಸಾಹದಲ್ಲಿ ಆರಂಭಗೊಂಡಿದೆ.
ಬೆಳಗಾವಿಯ ಪೊಲೀಸ್ ಹೆಡ್’ಕ್ವಾಟರ್ಸ್’ನಲ್ಲಿರುವ ಹಜರತ್ ಸಯ್ಯದ ಕೇಶರಶಾಹವಲಿ ಪೀರ ಅವರ ಗಂಧ ಮತ್ತು ಉರುಸು ಶರೀಪ್ ಕಾರ್ಯಕ್ರಮವು ಇಂದಿನಿಂದ ಉತ್ಸಾಹದಲ್ಲಿ ಆರಂಭಗೊಂಡಿತು. ಶುಕ್ರವಾರ ಮುಂಜಾನೆ ನಮಾಜ್ ಅದಾ ಮಾಡಿದ ಬಳಿಕ ಮಧ್ಯಾನ್ಹ ಮೆರವಣಿಗೆಯ ಮೂಲಕ ಗಂಧವನ್ನು ತೆಗೆದುಕೊಂಡು ಹೋಗಲಾಯಿತು.
ಈ ವೇಳೆ ಹಿಂದೂ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ರಾತ್ರಿ ಹಿರೇಬಾಗೇವಾಡಿಯ ಪೀರ್-ಎ-ತರಿಖತ್ ಹಜರತ್ ಪೀರ್ ಸಯ್ಯದ ಗೌಸ್ ಮೊಹಿಯೋದ್ಧೀನ ಷಾ ಕಾದ್ರಿ, ಪೀರ್ ಅಬ್ದುಲ್ ರೆಹಮಾನ ಶಹಾ ಕಾದ್ರಿ, ಸಜ್ಜಾದಾನಶಿನ ಆಸ್ತಾನ-ಎ- ಸಯ್ಯದ ಮೊಹ್ಮದಗೌಸ್ ಷಾ ಕಾದ್ರಿ ಅವರ ಅಮೃತ ಹಸ್ತದಿಂದ ಗಂಧವನ್ನು ಅರ್ಪಿಸಲಾಯಿತು.
ನಾಳೆ ಶನಿವಾರ ರಾತ್ರಿ 10 ಗಂಟೆಗೆ ರೆಹಮಾನ ಅಲಿ ಸಾಬರಿ ಮತ್ತು ಸಲಮಾನ್ ಅಝಮೇರಿ ನಿಝಾಮಿ ಅವರ ಕವ್ವಾಲಿ ಮುಖಾಬಲಾ ನಡೆಯಲಿದೆ. ಭಾನುವಾರದಂದು ಮಧ್ಯಾನ್ಹ ಮಹಾಪ್ರಸಾದ ನಡೆಯಲಿದೆ ರಾತ್ರಿ ಕರ್ನಾಟಕದ ಜಾನಪದ ಕಲಾವಿದ ನಿಜಾಮ್ ಅಲ್ಲಾಖಾನ್ ಮಹಾಲಿಂಗಪೂರ ಅವರ ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ