Breaking News

ಮೇ.14 ರಂದು ದಲಿತ ಉದ್ದಿಮೆದಾರರಿಗಾಗಿ ನವೋದ್ಯಮ ಸಭೆ : ಉದ್ಯಮಿ ಅರವಿಂದ ಗಟ್ಟಿ

Spread the love

ಬೆಳಗಾವಿಯಲ್ಲಿ ಮೇ.14 ರಂದು ದಲಿತ ಉದ್ದಿಮೆದಾರರಿಗಾಗಿ ನವೋದ್ಯಮ ಸಭೆ : ಉದ್ಯಮಿ ಅರವಿಂದ ಗಟ್ಟಿ
ಬೆಳಗಾವಿ: ದಲಿತ ಉದ್ಯಮಿದಾರರು ಹೆಚ್ಚಾಗಬೇಕೆಂದು ಮೇ.14 ರಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ನವೋದ್ಯಮ ಸಭೆ‌ ಆಯೋಜಿದಲಾಗಿದೆ ಎಂದು ಕರ್ನಾಟಕ ದಲಿತ ಉದ್ಯಮಿ ಸಂಘರ್ಷ ಸಮಿತಿಯ ಅರವಿಂದ ಗಟ್ಟಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನವ ಉದ್ಯಮಿಯಾಗ ಬಯಸುವವರು ತಮ್ಮ ಭಾವಚಿತ್ರದೊಂದಿಗೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದರ ಲಾಭವನ್ನು ದಲಿತ ಹೊಸ‌ ಉದ್ಯಮಿಗಳು ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ದಲಿತ ಉದ್ಯಮಿದಾರರು ಉನ್ನತ ಸ್ಥಾನಕ್ಕೆ ಬರಬೇಕು. ಹೊಸ ಉದ್ಯಮಿಗಳಿಗೆ ಜಾಗ ಕೊಟ್ಟು ಅವರಿಗೆ ಆರ್ಥಿಕ‌ ಸಹಾಯ ಮಾಡುವ ಉದ್ದೇಶವನ್ನು ಈ ಸಭೆ ಆಯೋಜಿಸಲಾಗಿದೆ. ದಲಿತ ಉದ್ಯಮಿಗಳಿಗೆ ನಿರಂತರವಾಗಿ ಕಾರ್ಯಾಗಾರ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ದಲಿತ ಉದ್ಯಮಿಗಳು‌ ಯುವ ಉದ್ಯಮಿಗಳಿಗೆ ಸಹಾಯ, ಸಹಕಾರ ಕೊಡಬೇಕು. ಜಿಲ್ಲೆಯಲ್ಲಿಯ ದೊಡ್ಡ ದೊಡ್ಡ ‌ದಲಿತ ನಾಯಕರು ಯಶಶ್ವಿಯಾಗಿದ್ದಾರೆ. ಯುವ ದಲಿತ ಉದ್ಯಮಿಗಳು ಅವರಂತೆ ಬೆಳೆಯಬೇಕು ಎಂದರು.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ