13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿತನಿಗೆ 20 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ. ದಂಡ
ನೊಂದ ಬಾಲಕಿಗೆ 4 ಲಕ್ಷ ಸರ್ಕಾರ ಪರಿಹಾರ ನೀಡುವಂತೆ ಆದೇಶ
ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯವನ್ನೆಸಗಿದ ಖಾನಾಪೂರದ ಆರೋಪಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂಪಾಯಿ ದಂಡ ಮತ್ತು ನೊಂದ ಬಾಲಕಿಗೆ 4 ಲಕ್ಷ ನೀಡುವಂತೆ ಆದೇಶಿಸಿ ತೀರ್ಪನ್ನು ನೀಡಿದೆ.
13 ವರ್ಷದ ಸರಿಯಾಗಿ ಮಾತನಾಡಲು ಬಾರದ ಬಾಲಕಿ ತನ್ನ ಅಜ್ಜಿಯೊಂದಿಗೆ ವಾಸವಿದ್ದಳು. ಖಾನಾಪೂರ ತಾಲೂಕಿನ ಪಾಸ್ಟೊಲಿ ಗ್ರಾಮದ ಆರೋಪಿ ಶಾಹು ರಾಮಾ ಗಾವಡೆ (40) ಈತನು 16/09/2023 ರಂದು ಮನೆಯಲ್ಲಿ ಯಾರೂ ಇಲ್ಲದಾಗ ಆಕೆಯನ್ನು ಪಕ್ಕದ ಕಾಡಿನಲ್ಲಿ ಕರೆದೊಯ್ದು ದೈಹಿಕ ಅತ್ಯಾಚಾರವೆಸಗಿರುತ್ತಾನೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯ ಇನ್ಸಪೇಕ್ಟರ್ ಈಶ್ವರ ಜಿನ್ನವಗೋಳ , ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ ರವರು ತನಿಖೆ ಪೂರೈಸಿ ದಿನಾಂಕ 01/12/2023 ರಂದು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದರು.
ಆರೋಪಿಯನದನು ಪಿ.ಎಸ್.ಐ ಚನ್ನಬಸಪ್ಪ ಬಬಲಿ ಅವರು ನ್ಯಾಯಾಂಗ ವಶಕ್ಕೆ ಪಡೆದಿದ್ದರು. ತನಿಖಾ ಸಹಾಯಕರಾಗಿ ಸಿಪಿಸಿ ಮಂಜುನಾಥ್ ಮುಸಳಿ ಮತ್ತು ಪಿ ಬಿ ಹೊಂಡೆದ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಪೋಕ್ಸೋ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾಧ ಶ್ರೀಮತಿ ಸಿ ಎಮ್ ಪುಷ್ಪಲತಾ ಅವರು ಆರೋಪಿತನಿಗೆ 20 ವರ್ಷ ಜೈಲು ಕಾರಾವಾಸ ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ಹಾಗೂ 4 ಲಕ್ಷ ರೂಪಾಯಿ ಪರಿಹಾರ ನಿಧಿ ವಿಧಿಸಿದ್ದು ತೀರ್ಪನ್ನು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಲ್ ವಿ ಪಾಟೀಲ್ ವಕಾಲತ್ತು ವಹಿಸಿದ್ದರು.
Laxmi News 24×7