Breaking News

ವಿಜಯಪುರ ಜಿಲ್ಲೆಯಲ್ಲಿ ಭೂಮಿಯಾಳದಿಂದ ಭಾರಿ ಶಬ್ದ

Spread the love

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹಡಗಿನಾಳ ಹಾಗೂ ಇತರೆ ಗ್ರಾಮಗಳಲ್ಲಿ ಇಂದು ಭೂಮಿಯಾಳದಿಂದ ಭಾರಿ ಶಬ್ದ ಕೇಳಿಬಂದಿದೆ.

ನಗರದ ಕೆಹೆಚ್​​ಬಿ ಕಾಲೊನಿ, ಬ್ಯಾಂಕರ್ಸ್ ಕಾಲೊನಿ, ಸದಾಶಿವ ನಗರ, ಆಕೃತಿ ಕಾಲೊನಿಗಳ ನಿವಾಸಿಗಳಿಗೂ ಶಬ್ದ ಕೇಳಿಸಿದೆ.

ಭೂಮಿ ನಡುಗಿದಂತೆ ಅನುಭವವಾಗಿದೆ. ಭೂಕಂಪನಕ್ಕೆ ಮನೆಯೊಳಗಿನ ಪಾತ್ರೆಗಳು ಅಲ್ಲಾಡಿ ಬಿದ್ದಿವೆ ಎಂದು ಜನರು ಹೇಳಿದ್ದಾರೆ.

ಥೈಲ್ಯಾಂಡ್‌ನ ಬ್ಯಾಂಕಾಂಕ್ ಹಾಗೂ ಇತರೆಡೆಗಳಲ್ಲಿ ಭೂಕಂಪವಾಗಿರುವುದರಿಂದಾಗಿ ಇಲ್ಲಿಯೂ ಭೂಕಂಪವಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯ ಇದು ಭೂಕಂಪವೇ ಅಥವಾ ಭೂಮಿಯಿಂದ ಬಂದಿರುವ ಶಬ್ದವೇ ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ